
ಕೂಡ್ಲಿಗಿ:ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
News Details
ವಿಜಯನಗರ : ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಅಮರದೇವರಗುಡ್ಡ, ಕೆರೆಯಲ್ಲಿ ಹಲವು ದಿನಗಳಿಂದ ಪ್ರತಿದಿನವೂ ಸಾವಿರಾರು ಮೀನುಗಳು ಸಾವನ್ನಪ್ಪಿ ದಡ ಸೇರಯತ್ತಿವೆ. ನಿಖರ ಕಾರಣ ಮಾತ್ರ ನಿಗೂಢವಾಗಿದೆ,
ಕೆರೆಯಲ್ಲಿ ಮೀನುಗಾರಿಕೆ ಮಾಡಲು ಗುತ್ತಿಗೆ ಪಡೆದವರು ಹೇಳುವ ಪ್ರಕಾರ ತಮಗಾಗದವರು ಯಾರೋ.. ಕೆರೆಯಲ್ಲಿ ವಿಷಮಿಶ್ರಣ ಮಾಡಿರುವ ಸಾಧ್ಯತೆ ಇದ್ದು. ಈ ಕಾರಣಕ್ಕಾಗಿ ಈ ರೀತಿ ಮೀನುಗಳು ಮರಣವನ್ನುಪ್ಪುತ್ತಿವೆ, ಪರಿಣಾಮ ಸುಮಾರು ಮೂವತ್ತು ಲಕ್ಷಕ್ಕೂ ಅಧಿಕ ಬೆಲೆಯ ಮೀನುಗಳು ಮರಣವನ್ನಪ್ಪಿವೆ ಎಂದು ಮೀನುಗಾರಿಕೆ ಗುತ್ತಿಗೆ ದಾರರಾದ ಭೋವಿ ರಮೇಶ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಳೆದ ವರ್ಷದ ಹಿಂದೆ ಇದೇ ರೀತಿ ನಷ್ಟ ಅನುಭವಿಸಿದ್ದು, ಅದೇ ರೀತಿ ಈ ಭಾರಿಯೂ ಜರುಗಿದೆ. ಯಾರೋ ಕಿಡಿಗೇಡಿಗಳು ಕೆರೆಯ ನೀರಿಗೆ ವಿಷ ಬೆರೆಸಿದ್ದಾರೆಂಬ ಷಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಸಂಬಂಧಿಸಿದ ಇಲಾಖೆಗಳು ತಮಗಾದ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಅವರು ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಿದ್ದಾರೆ.