Loading...
  • aksharakrantinagarajnaik@gmail.com
  • +91 8073197439
Total Visitors: 2788
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-12

ಅರಣ್ಯ ಹಕ್ಕು ಕಾಯುವ ಪ್ರದೇಶದಲ್ಲೇ ಗಿಡ ನೆಡುವ ತಯಾರಿ

News Details

ಅರಣ್ಯ ಹಕ್ಕು ಅರ್ಜಿ ಸಲ್ಲಿಸಿ ಪಟ್ಟಾಗಾಗಿ ಕಾದಿರುವ ಜನರ ಕ್ಷೇತ್ರದಲ್ಲಿಯೂ ಅರಣ್ಯ ಸಿಬ್ಬಂದಿ ಗಿಡ ನೆಡುವ ತಯಾರಿ ನಡೆಸಿದ್ದಾರೆ. ಇದಕ್ಕಾಗಿ ಹೊನ್ನಾವರದ ಕೆಲವು ಕಡೆ ಗುಂಡಿ ತೋಡಿರುವುದು ಗಮನಕ್ಕೆ ಬಂದಿದೆ.

ಅನೇಕ ವರ್ಷಗಳಿಂದ ಅರಣ್ಯ ಭೂಮಿ ಸಾಗುವಳಿ ಮಾಡಿದ ಅತಿಕ್ರಮಣದಾರರು ಅರಣ್ಯ ಹಕ್ಕು ಪಟ್ಟಾ ವಿತರಣೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಅತಿಕ್ರಮಣ ಕ್ಷೇತ್ರವನ್ನು ಸರ್ಕಾರ ಜಿಪಿಎಸ್ ಪ್ರಕ್ರಿಯೆಗೆ ಒಳಪಡಿಸಿದೆ. ಸದ್ಯ ತಲತಲಾಂತರದಿAದ ಉಳುಮೆ ಮಾಡಿ ಬದುಕುತ್ತಿರುವ ಜನರ ಹೊಲ-ಗದ್ದೆಗಳಲ್ಲಿ ಅರಣ್ಯ ಸಿಬ್ಬಂದಿ ಗುಂಡಿ ತೋಡಿದ್ದಾರೆ.

ಹೊನ್ನಾವರ ತಾಲೂಕಿನ ಮಾಗೋಡ, ಜಲವಳ್ಳಿ, ಕರ್ಕಿ, ಹಡಿನಬಾಳ ಮೊದಲಾದ ಕಡೆ ಗುಂಡಿ ತೋಡಿರುವುದು ಕಾಣಿಸುತ್ತಿದೆ. ಈ ಭಾಗದಲ್ಲಿ ಅರಣ್ಯವಾಸಿಗಳು ನೆಟ್ಟ 30 ವರ್ಷ ಹಿಂದಿನ ಗೇರು ಮರಗಳಿದ್ದರೂ ಅದನ್ನು ಲೆಕ್ಕಿಸದೇ ಅರಣ್ಯ ಇಲಾಖೆಯವರು ಹೊಸ ಗಿಡ ನಾಟಿಗಾಗಿ ಗುಂಡಿ ತೆಗೆಯುತ್ತಿದ್ದಾರೆ. ಕಳೆದ ಮೂರು ವಾರಗಳಿಂದ ಈ ಕೆಲಸ ನಡೆಯುತ್ತಿದೆ. ಮಳೆಗಾಲಕ್ಕೂ ಮುನ್ನ ಇಲ್ಲಿ ಅರಣ್ಯ ಜಾತಿಯ ಗಿಡಗಳನ್ನು ನಾಟಿ ಮಾಡುವ ತಯಾರಿ ಬರದಿಂದ ಸಾಗಿದೆ.

`ಕಳೆದ ಸಲ ಗುಂಡಿ ತೆಗೆದು ಗಿಡ ನಾಟಿ ಮಾಡಿದ ಸ್ಥಳದಲ್ಲಿಯೇ ಈ ಬಾರಿ ಮತ್ತೆ ಗುಂಡಿ ತೋಡಿ ಗಿಡ ನೆಡುವ ಪ್ರಯತ್ನ ನಡೆದಿದೆ. ನಡುತೋಪುಗಳ ಮಾಹಿತಿ ಪ್ರಕಟಿಸಲು ಅರಣ್ಯಾಧಿಕಾರಿಗಳ ಬಳಿ ಪ್ರಶ್ನಿಸಲಾಗಿದೆ' ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.