Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-12

ಎಂಟು ತಿಂಗಳ ಭೂವಿವಾದ: ದತ್ತ ನಾಯ್ಕ್ ದೂರು, ಇಬ್ಬರ ವಿರುದ್ಧ ಪ್ರಕರಣ

News Details

ಎಂಟು ತಿಂಗಳ ಹಿಂದೆ ನಡೆದ ಭೂ ವ್ಯಾಜ್ಯದ ಬೆದರಿಕೆ ಪ್ರಕರಣ ವಿಷಯವಾಗಿ ದತ್ತ ನಾಯ್ಕ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಗಣೇಶ ಪಟಗಾರ ಹಾಗೂ ಕುಪ್ಪಯ್ಯ ಪಟಗಾರ ಎಂಬಾತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಮಟಾದ ಬರ್ಗಿಯಲ್ಲಿ ದತ್ತ ನಾಯ್ಕ ಅವರು ವಾಸವಾಗಿದ್ದಾರೆ. ಬರ್ಗಿ ಗ್ರಾಮದ ಸರ್ವೇ ನಂ 36ಎ1/2ಅ ಕ್ಷೇತ್ರಕ್ಕೆ ಅವರು ಬೇಲಿ ನಿರ್ಮಿಸಿಕೊಂಡಿದ್ದು, ಇದನ್ನು ಬರ್ಗಿ ನಾಡವರಕೊಪ್ಪದ ಗಣೇಶ ಪಟಗಾರ ಹಾಗೂ ಕುಪ್ಪಯ್ಯ ಪಟಗಾರ ವಿರೋಧವ್ಯಕ್ತಪಡಿಸಿದ್ದಾರೆ. ಇದೇ ವಿಷಯವಾಗಿ ಅವರ ನಡುವೆ ಜಗಳ ನಡೆದಿದೆ.

2024ರ ಜುಲೈ 7ರಂದು ಗಣೇಶ ಪಟಗಾರ ಹಾಗೂ ಕುಪ್ಪಯ್ಯ ಪಟಗಾರ ಸೇರಿ ದತ್ತ ನಾಯ್ಕ ಅವರು ನಿರ್ಮಿಸಿದ ಬೇಲಿಯನ್ನು ನಾಶ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ದತ್ತಾ ನಾಯ್ಕ ಅವರಿಗೆ ಬೆದರಿಸಿದ್ದಾರೆ. `ಇದು ನಮ್ಮ ಜಾಗ' ಎಂದು ಗಣೇಶ ಪಟಗಾರ ಹಾಗೂ ಕುಪ್ಪಯ್ಯ ಪಟಗಾರ ವಾದಿಸಿದ್ದಾರೆ. ಗಡಿ ಜಗಳವಾಗಿ ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣ ಬಾಕಿಯಿದ್ದು, ಈ ಅವಧಿಯಲ್ಲಿ ಬೇಲಿ ಕಡಿಯದಂತೆ ತಿಳಿಸಿದರೂ ಬೇಲಿ ಹಾಳು ಮಾಡಿದ ಕಾರಣ ದತ್ತಾ ನಾಯ್ಕ ಸಹ ಸಿಟ್ಟಾಗಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು ಗಣೇಶ ಪಟಗಾರ ಹಾಗೂ ಕುಪ್ಪಯ್ಯ ಪಟಗಾರ ಸೇರಿ `ಇಲ್ಲಿ ಬೇಲಿ ನಿರ್ಮಿಸಿದರೆ ಕಡಿದು ಹಾಕುವೆ' ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಷಯವಾಗಿ ಕುಮಟಾ ನ್ಯಾಯಾಲಯದ ಮೊರೆ ಹೋದ ದತ್ತ ನಾಯ್ಕ ಅವರು ಎಂಟು ತಿಂಗಳ ಅಲೆದಾಟ ನಡೆಸಿ ಗಣೇಶ ಪಟಗಾರ ಹಾಗೂ ಕುಪ್ಪಯ್ಯ ಪಟಗಾರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಶುರು ಮಾಡಿದ್ದಾರೆ.