
0:00:00
2025-04-12
ಪ್ಯಾಂಟಿನೊಳಗೆ ಸಿಕ್ಕಿದ್ದ ನಾಗರ ಹಾವು: ಉರಗತಜ್ಞ ರಕ್ಷಣೆಯಿಂದ ಪ್ರಾಣಾಪಾಯದಿಂದ ತಪ್ಪಿದ ಮಾಂತೇಶ
News Details
ಶಿರಸಿಯ ಮಾಂತೇಶ ಅವರ ಪ್ಯಾಂಟಿನ ಒಳಗೆ ನಾಗರ ಹಾವು ಸಿಕ್ಕಿಬಿದ್ದಿದ್ದು, ಉರಗತಜ್ಞ ಪ್ರಶಾಂತ ಹುಲೆಕಲ್ ಹಾವನ್ನು ರಕ್ಷಿಸಿ ಮಾಂತೇಶ ಅವರ ಪ್ರಾಣವನ್ನು ಉಳಿಸಿದ್ದಾರೆ.
ಶಿರಸಿ ನಾರಾಯಣಗುರು ನಗರದ ಮಾಂತೇಶ ಅವರು ಶುಕ್ರವಾರ ಸಂಜೆ ಪೇಟೆಗೆ ಹೋಗುವವರಿದ್ದರು. ಅಂಗಿ ಧರಿಸಿದ ಅವರು ಪ್ಯಾಂಟಿಗಾಗಿ ಕೈ ಹಾಕಿದರು. ಆಗ, ಅದರೊಳಗಿದ್ದ ನಾಗರ ಬುಸ್ ಎಂದಿದ್ದು, ಮಾಂತೇಶ್ ಅವರು ಬೆಚ್ಚಿ ಬಿದ್ದರು.
ತಕ್ಷಣ ಆ ಪ್ಯಾಂಟನ್ನು ನೆಲದ ಮೇಲೆ ಎಸೆದು ದೂರ ಸರಿದರು. ಕಂಗಾಲಾದ ಮಾಂತೇಶ ಅವರು ಜೋರಾಗಿ ಬೊಬ್ಬೆ ಹೊಡೆದರು. ಅದನ್ನು ಕೇಳಿ ಅಕ್ಕ-ಪಕ್ಕದವರು ಸಹ ಆಗಮಿಸಿದರು. ಬಳಿಕ ಉರಗತಜ್ಞ ಪ್ರಶಾಂತ ಹುಲೆಕಲ್ ಅವರನ್ನು ಜನ ಸ್ಥಳಕ್ಕೆ ಕರೆಯಿಸಿದರು.
ಪ್ಯಾಂಟಿನ ಒಳಗೆ ಸಿಲುಕಿಕೊಂಡಿದ್ದ ಹಾವನ್ನು ಪ್ರಶಾಂತ ಹುಲೆಕಲ್ ಹೊರತೆಗೆದರು. ನಂತರ ಅದನ್ನು ಕಾಡಿಗೆ ಬಿಟ್ಟರು. ಮಾಂತೇಶ ಕುಟುಂಬದವರು ಸಹ ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.