Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-14

ಹಾಲಕ್ಕಿ ಸಮುದಾಯದ 'ಹಗರಣ': ದಬ್ಬಾಳಿಕೆ ಮತ್ತು ಅಸಮಾನತೆ ವಿರುದ್ಧದ ಜಾಗೃತಿ ಸಂಗ್ರಾಮ

News Details

ಬ್ರಿಟೀಷರ ದಬ್ಬಾಳಿಕೆ, ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆ ಹಾಗೂ ಆಡಳಿತದಲ್ಲಿನ ಅಂಕು-ಡೊoಕುಗಳ ಬಗ್ಗೆ ಅಧಿಕಾರದಲ್ಲಿರುವವರಿಗೆ ಅರಿವು ಮೂಡಿಸುವುದಕ್ಕಾಗಿ ಹಾಲಕ್ಕಿ ಸಮುದಾಯದವರು ಕಂಡುಕೊoಡಿದ್ದ ದಾರಿ `ಹಗರಣ'

ಪರಕೀಯರ ಭಾಷೆ ಬಾರದ ಹಾಲಕ್ಕಿ ಜನ `ಹಗರಣ'ದ ಮೂಲಕ ಸಮಾಜದಲ್ಲಿನ ಅಂಕು-ಡೊoಕುಗಳ ಬಗ್ಗೆ ಮನವರಿಕೆ ಮಾಡುತ್ತಿದ್ದರು. ಇದರಿಂದ ಮುಜುಗರಕ್ಕೆ ಒಳಗಾಗಿ ಬ್ರಿಟೀಷರು ತಮ್ಮ ತಪ್ಪುಗಳನ್ನು ತಿದ್ದುಕೊಳ್ಳುತ್ತಿದ್ದರು. ಬ್ರಿಟೀಷರು ದೇಶ ಬಿಟ್ಟು ಹೋದ ನಂತರವೂ ಹಾಲಕ್ಕಿ ಸಮುದಾಯದವರು ಹಗರಣ ನಡೆಸುವುದನ್ನು ಬಿಟ್ಟಿಲ್ಲ. ಕರಾವಳಿ ಭಾಗದ ಅನೇಕ ಊರುಗಳಲ್ಲಿ ಇಂದಿಗೂ ಹಗರಣಗಳು ಜೀವಂತವಾಗಿದೆ. ಅಲ್ಲಿ ಇಲ್ಲಿ ನಡೆದ ಅಪರಾತಪರಾಗಳು ಹಗರಣದಲ್ಲಿ ಬಯಲಾಗುತ್ತದೆ. ಹೀಗಾಗಿ ಇದನ್ನು ನೋಡುವುದಕ್ಕಾಗಿ ನಾನಾ ಭಾಗದ ಜನ ಹಗರಣದ ಕಡೆ ಬಂದು ಆಕರ್ಷಿತರಾಗುತ್ತಿದ್ದಾರೆ.

`ಬ್ರಿಟಿಷ್ ಅಧಿಕಾರಿಗಳಿಗೆ ಕನ್ನಡ ಅರ್ಥವಾಗುತ್ತಿರಲಿಲ್ಲ. ನಮ್ಮ ಜನರಿಗೆ ಇಂಗ್ಲಿಷ್ ತಿಳಿದಿರಲಿಲ್ಲ. ಸಂವಹನ ಸಮಸ್ಯೆ ಉಂಟಾದಾಗ ಹಗರಣ ಆಚರಿಸಲು ನಿರ್ಧರಿಸಲಾಯಿತು. ಸ್ಥಳೀಯ ಕಲಾವಿದರು ಹಗರಣ ಹುಟ್ಟು ಹಾಕಿದರು. ಜಾತ್ರೆ, ಸುಗ್ಗಿ ಕುಣಿತದ ಸಂದರ್ಭದಲ್ಲಿ ಹಗರಣಗಳನ್ನು ನಡೆಸಿ ಹಾಲಕ್ಕಿ ಜನ ಬ್ರಿಟೀಷರಿಗೆ ಬುದ್ದಿ ಕಲಿಸಿದರು' ಎಂದು ಹಾಲಕ್ಕಿ ಹಗರಣದ ವಿಶೇಷದ ಬಗ್ಗೆ ಶಿರವಾಡದ ರವಿ ಗೌಡ ವಿವರಿಸುತ್ತಾರೆ. `ಈಗಿನ ತಲೆಮಾರಿನವರು ತಮ್ಮ ಕ್ರಿಯಾಶೀಲತೆ, ಕಲೆಯ ಜೊತೆ ಆಧುನಿಕ ಸ್ಪರ್ಶ ನೀಡುತ್ತಿದ್ದಾರೆ. ಸಮಸ್ಯೆಗಳನ್ನು ಪ್ರತಿಬಿಂಬಿಸುವ ಜೊತೆ ಮನರಂಜನೆ ನೀಡುವಲ್ಲಿಯೂ ಹಗರಣ ಮುಖ್ಯಪಾತ್ರವಹಿಸಿದೆ' ಎಂದವರು ಅಭಿಪ್ರಾಯವ್ಯಕ್ತಪಡಿಸಿದರು.

ಶನಿವಾರ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಹಾಲಕ್ಕಿ ಸಮುದಾಯದ ಹಗರಣ ನಡೆದಿದ್ದು, ಈ ಹಗರಣದಲ್ಲಿ ವಿದೇಶಿಗರೂ ಹೆಜ್ಜೆ ಹಾಕಿದರು. ಬ್ರೀಟಿಷರನ್ನು ಹಂಗಿಸುವುದಕ್ಕಾಗಿ ಹುಟ್ಟಿಕೊಂಡ ಹಗರಣದ ಹೋರಾಟದಲ್ಲಿ ಪರಕಿಯರೂ ಹೆಜ್ಜೆ ಹಾಕಿದ್ದು ವಿಶೇಷ ಎನಿಸಿತು. ಹುಳಸೆಕೇರಿ ಹಾಲಕ್ಕಿ ಒಕ್ಕಲಿಗರ ಸಮಾಜದ ಸುಗ್ಗಿ ಹಬ್ಬದ ಅಂಗವಾಗಿ ರಥಬೀದಿಯಲ್ಲಿ ನಡೆದ ಹಗರಣದಲ್ಲಿ ವಿದೇಶಿಗರು ಉತ್ಸಾಹದಿಂದ ಭಾಗವಹಿಸಿದರು. `ಗೊಂಬೆ ಜೊತೆ ಗೊಂಬೆ ನಡೆಯುತ್ತಿದೆ' ಎಂದು ಅಲ್ಲಿದ್ದ ಜನ ಮಾತನಾಡಿಕೊಂಡರು.