Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-14

ಚಲಿಸುತ್ತಿದ್ದ ಕಾರಿನಲ್ಲಿ ಸ್ಟಂಟ್: ಭಟ್ಕಳದ 7 ಜನರ ವಿರುದ್ಧ ಸೂಳ್ಯ ಪೊಲೀಸರ ಕಾನೂನು ಕ್ರಮ

News Details

ಚಲಿಸುತ್ತಿದ್ದ ಕಾರಿನಲ್ಲಿ ಸ್ಟಂಟ್ ಮಾಡಿದ ಕಾರಣ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಏಳು ಜನರ ವಿರುದ್ಧ ಸೂಳ್ಯ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಏಪ್ರಿಲ್ 5ರಂದು ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಹಂಚಿಕೊoಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಭಾರೀ ಪ್ರಮಾಣದಲ್ಲಿ ವೈರಲ್ ಆಗಿತ್ತು. ಆ ವಿಡಿಯೋ ನೋಡಿದ ಪೊಲೀಸರು ಭಟ್ಕಳದ ಆರು ಜನರಿಗೆ ಬಿಸಿ ಮುಟ್ಟಿಸಿದರು. ಅಪಾಯಕಾರಿ ರೀತಿಯಲ್ಲಿ ಕಾರು ಚಾಲನೆ ಮಾಡಿದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮದ ಗೂನಡ್ಕ ಬಳಿ ಆ ಏಳು ಜನ ಅಪಾಯಕಾರಿ ರೀತಿ ವರ್ತಿಸಿದ್ದರು. ಸಂಪಾಜೆಯಿoದ ಸುಳ್ಯಕ್ಕೆ ಹೋಗುತ್ತಿದ್ದ ಕಾರಿನ ಚಾಲಕ ಅಜಾಗರೂಕತೆಯಿಂದ ವಾಹನ ಓಡಿಸಿರುವುದು ಸೆರೆಯಾಗಿತ್ತು. ಇಬ್ಬರು ಕಾರಿನ ಸನ್‌ರೂಪ್ ತೆರೆದು ನಿಂತಿರುವುದು ಹಾಗೂ ಉಳಿದ ನಾಲ್ವರು ಕಾರಿನ ಬಾಗಿಲು ತೆರೆದು ನಿಂತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು.

ಈ ವಿಡಿಯೋ ಆಧಾರದಲ್ಲಿ ಪೊಲೀಸರು ಕಾರು ಚಾಲಕ ಶಾಜಿಲ್ ಮತ್ತು ಅವರ ಆರು ಸ್ನೇಹಿತರಾದ ಅತಿಶ್, ಶಮನ್, ಜಯೇಶ್, ಸಾಜಿಬ್, ಸಾಹಿಬ್ಜ್ ಮತ್ತು ಹಸನ್ ವಿರುದ್ಧ ಕ್ರಮ ಜರುಗಿಸಿದರು. ವಿಚಾರಣೆ ವೇಳೆ ಈ ಏಳು ಜನ ಮಡಿಕೇರಿ ಪ್ರವಾಸಕ್ಕೆ ಹೋದ ಬಗ್ಗೆ ತಿಳಿಸಿದ್ದಾರೆ. ಭಟ್ಕಳಕ್ಕೆ ಮರಳುವಾಗ `ರೀಲ್ಸ್' ಮಾಡುವುದಕ್ಕಾಗಿ ಅಪಾಯಕಾರಿ ರೀತಿ ಕಾರು ಚಲಾಯಿಸಿದನ್ನು ಒಪ್ಪಿಕೊಂಡಿದ್ದಾರೆ.