
0:00:00
2025-04-14
ಹಳಿಯಾಳದಲ್ಲಿ ಮಟ್ಕಾ ಆಟಕ್ಕೆ ಪೊಲೀಸರ ದಾಳಿ
News Details
ಹಳಿಯಾಳದ ಭಾಗವತಿ ಬಳಿಯಿರುವ ಹನುಮಾನ ದೇವಸ್ಥಾನದ ಎದುರಿನ ರಸ್ತೆಯಲ್ಲಿ ನಡೆಯುತ್ತಿದ್ದ ಮಟ್ಕಾ ಆಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ.
ಭಾಗವತಿಯ ಯಾಸೀನ ಗಬರಸಾಬ್ ಬಾಳೆಗುಂದಿ (30) ಎಂಬಾತರು ಅಲ್ಲಿ ರಸ್ತೆ ಮೇಲೆ ನಿಂತು ಜೂಜಾಡಿಸುತ್ತಿದ್ದರು. ಅದೃಷ್ಟ ತಾಗಿದರೆ 1 ರೂಪಾಯಿಗೆ 80ರೂ ನೀಡುವುದಾಗಿ ಆಮೀಷ ಒಡ್ಡಿ ಜನರಿಂದ ಹಣ ಸಂಗ್ರಹಿಸುತ್ತಿದ್ದರು. ರಸ್ತೆಯಲ್ಲಿ ಹೋಗಿ-ಬರುವವರನ್ನು ಕೂಗಿ ಕರೆದು ಹಣ ಹೂಡುವಂತೆ ಪ್ರೇರೇಪಿಸುತ್ತಿದ್ದರು.
ಹಳಿಯಾಳ ಪೊಲೀಸ್ ಠಾಣೆಯ ಪಿಎಸ್‌ಐ ಕುಷ್ಣಗೌಡ ಅರಿಕೇರಿ ಇದನ್ನು ಗಮನಿಸಿದರು. ತಕ್ಷಣ ಯಾಸೀನ ಮೇಲೆ ದಾಳಿ ನಡೆಸಿದರು. ಆಗ, ಅವರು ಬರೆದಿದ್ದ ಅಂಕಿ-ಸoಖ್ಯೆಗಳ ಚೀಟಿ ಸಿಕ್ಕಿತು. ಜೊತೆಗೆ ಆ ದಿನ ಜನರಿಂದ ಸಂಗ್ರಹಿಸಿದ್ದ 460ರೂ ಹಣವೂ ದೊರೆಯಿತು. ಹೀಗಾಗಿ ಯಾಸಿನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.