Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-14

ಹುಳಸೆಕೇರಿಯಲ್ಲಿ ಸುಗ್ಗಿಹಬ್ಬದ ಹಗರಣ (ಜಾಗರ) ಆಚರಣೆ

News Details

ಸಾಮಾಜಿಕ ಅಂಕುಡೊAಕುಗಳ ಅನಾವರಣ , ಮನರಂಜನೆಯ ರಸದೌತದೊಂದಿಗೆ ಹುಳಸೆಕೇರಿ ಹಾಲಕ್ಕ ಒಕ್ಕಲಿಗ ಸಮಾಜ ಸುಗ್ಗಿಹಬ್ಬದ ನಾಲ್ಕನೇ ದಿನದ ಹಗರಣ( ಜಾಗರ) ಶನಿವಾರ ರಾತ್ರಿ ರಥಬೀದಿಯಲ್ಲಿ ನಡೆಯಿತು.
ಕಳೆದ ಗುರುವಾರ ಪ್ರಾರಂಭವಾದ ಹಾಲಕ್ಕಿ ಒಕ್ಕಲಿಗ ಸಮಾಜದ ಸುಗ್ಗಿ ಹಬ್ಬದಲ್ಲಿ ಮನರಂಜನೆಯ ಜೊತೆ ಸಮಾಜದಲ್ಲಿನ ಆಗುಹೋಗುಗಳನ್ನು ಪ್ರದರ್ಶಿಸುವ ಈ ವಿಶಿಷ್ಟ ಹಗರಣ ಎಂದೇ ಕರೆಯುವ ಅಣಕು ಪ್ರದರ್ಶನದಲ್ಲಿ ಈ ವರ್ಷ ಪ್ರವಾಸಿ ತಾಣದಲ್ಲಿ ಎಲ್ಲೆಂದರಲ್ಲಿ ಜಾಗ ಖರೀದಿಸುವ ಹೊg ಊರಿನವರ ಕುರಿತು ಬಿಂಬಿಸಿದ ಚಿತ್ರಣದಲ್ಲಿ ನಿಜ ಒಂಟೆಯ ಮೇಲೆ ದುಬೈ ಶೇಕ್ ವೇಷದಾರಿಯಾಗಿ ಗೋಕರ್ಣ ಜಾಗ ಖರೀದಿಸಲು ಬಂದ ದುಬೈಶೇಕ್ ಎಂಬ ನಾಮಫಲಕ ದೊಂದಿಗೆ ಸಂಚರಿಸುತ್ತಿರುವುದು ಇಲ್ಲಿನ ಜಾಗಗಳ ಮಾರಾಟದ ಬಗೆಗೆ ವಿವರಿಸಿತ್ತು.
ಎಲ್ಲೆಂದರಲ್ಲಿ ಗುಡ್ಡ ಬೆಟ್ಟಗಳನ್ನು ಅಗೆದು ಮರ ಕಡಿದು ರೆಸಾರ್ಟ್ ನಿರ್ಮಿಸುತ್ತ ಪರಿಸರ ಹಾಳು ಮಾಡುವ ದೃಶ್ಯ, ಅಲ್ಲದೆ ಮರ ಕಡಿಯುವ ಬೃಹತ್ ಯಂತ್ರಗಳ ಕರ್ಕಶ ಶಬ್ದವನ್ನು ಬಿಂಬಿಸಿದ್ದು ಎಲ್ಲರ ಗಮನ ಸೆಳೆಯಿತು.
ಇನ್ನು ಪ್ರತಿ ಬಾರಿ ಪ್ರವಾಸಿ ತಾಣದ ಜಲಂತ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಹೊಸ ಯೋಜನೆಗಳ ಜಾರಿಗೆ ಮೀನಾಮೇಷ ಎಣಿಸುವ ಪಂಚಾಯತ್ ಸಭೆಗಳನ್ನು ಅಣಕಿಸುವ ಗೋಕರ್ಣ ಅಧಿವೇಶನ ಎಂಬ ರೂಪಕ, ಅಭಿವೃದ್ದಿಯ ಜಪ ಮಾಡಿ ಮತ ಪಡೆಯುವ ಜನಪ್ರತಿನಿಧಿಗಳು ಹಾಗೂ ಸಬೂಬ್ ಹೇಳಿ ತಪ್ಪಿಸಿಕೊಳ್ಳುವ ಅಧಿಕಾರಿ ವರ್ಗಗಳ ವಾಸ್ತವ ಚಿತ್ರಣವನ್ನು ಅನಾವರಣಗೊಳಿಸಿದ್ದರು.
ಇನ್ನು ಸಿನಿಮಾ ಚಿತ್ರೀಕರಣದ ದೃಶ್ಯ ನಟ ನಟಿಯರು ಪಡುವ, ಪಾಡು ಹಾಗೂ ಪ್ರವಾಸಿ ತಾಣ ಚಿತ್ರೀಕರಣಕ್ಕೆ ಗಮನಸೆಳೆಯುತ್ತಿರುವುದನ್ನು ಪ್ರದರ್ಶನ ಮಾಡಲಾಗಿತ್ತು.
ತುಳುನಾಡ ಆರಾಧ್ಯ ದೈವ ಕೊರಗಜ್ಜ ಮಹಿಮೆ ಯ ದೃಶ್ಯ ರೂಪಕ, ರಾಮ ಲಕ್ಷ್ಮಣರೊಂದಿಗೆ ತನ್ನ ಭಕ್ತಿ ತೊರೆಯುವ ಹನುಮಂತ , ಗೋಕರ್ಣ ಕ್ಷೇತ್ರ ಮಹಿಮೆ ಸಾರುವ ದೃಶ್ಯ ರೂಪಕ ಧಾರ್ಮಿಕತೆಯ ಸೆಲೆಹೆಯನ್ನು ಹೆಚ್ಚಿಸಿತ್ತು. ಮೀನನುಗಾರರ ಕಷ್ಟದ ಬದುಕಿನ ಚಿತ್ರಣ,ಕುಂಭಮೇಳ ಮುಗಿಸಿ ಗೋಕರ್ಣಕ್ಕೆ ಬಂದ ನಾಗಾಸಾಧುಗಳು,ಜನರ ಮಧ್ಯೆ ಓಡಾಡುವ ಮರಕಾಲು ಕಟ್ಟಿದ ವೇಷಧಾರಿಗಳು ಪ್ರಾಣಿಗಳು ತಮ್ಮ ವಾಸಸ್ಥಾನವಾದ ಕಾಡನ್ನ ಉಳಿಸಿ ಎಂದು ಸಾರುವ ಸಂದೇಶ ಹೊತ್ತ ಯುವಕರು ತಿರುಗಾಡುವುದು ಹಾಗೂ ವಿವಿಧ ಬೊಂಬೆಗಳ ವೇಷಧರಿಸಿ ತಿರುಗಾಡುವವರು ಹೀಗೆ ಭಿನ್ನ ವಿಭಿನ್ನ ಚಿತ್ರಣಗಳು ಸ್ಥಳೀಯರು ಹಾಗೂ ಪ್ರವಾಸಿಗರ ಮನಸೂರೆಗೊಂಡಿತು ,
ಈ ಎಲ್ಲಾ ವೇಷದಾರಿಗಳ ಜೊತೆ ಸುಗ್ಗಿ ತಂಡ ಹೆಜ್ಜೆ ಹಾಕುತ್ತಾ ಸಾಗುವ ವಿಶಿಷ್ಟ ಹಾಡಿನ ಸೊಬಗು ಹಾಗೂ ಯಕ್ಷಗಾನ ವೇಷಧಾರಿಗಳಾದ ಸುಗ್ಗಿ ತಂಡದವರು ನೃತ್ಯ ಬಹು ಆಕರ್ಷಕವಾಗಿತ್ತು.
ಹಾಲಕ್ಕಿ ಸುಗ್ಗಿಯ ಪ್ರಮುಖ ಎಂಭತ್ತು ವರ್ಷದ ಸೋಮ ಗೌಡ ಸಹ ವೇಷಧಾರಿಯಾಗಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು.
ಸಾಮಾಜಿಕ ಕಾರ್ಯಕರ್ತ ಸಂತೋಷ್ ಅಡಿ ಅತ್ಯುತ್ತಮ ರೂಪಕಕ್ಕೆ ಬಹುಮಾನ ನೀಡಿದ್ದು ಪ್ರಥಮ ಸ್ಥಾನವನ್ನು ಮರಕಡಿದು ಅಕ್ರಮ ರೆಸಾರ್ಟ್ ಕಟ್ಟುವ ರೂಪಕಕ್ಕೆ, ಎರಡನೇ ಬಹುಮಾನ ಪ್ರವಾಸಿ ತಾಣ ಸಮಸ್ಯೆ ಅನಾವರಣ ಮಾಡುವುದು, ಗೋಕರ್ಣದ ಅಧಿವೇಶನ ಚರ್ಚೆಯ ರೂಪಕಕ್ಕೆ, ಮೂರನೇ ಬಹುಮಾನವನ್ನು ಸಿನಿಮಾ ಚಿತ್ರೀಕರಣಕ್ಕೆ, ಹಾಗೂ ಸಮಾಧಾನಕರವನ್ನು ಮರಕಾಲು ಹಾಕಿಕೊಂಡು ತಿರುಗಾಡುವ ದೃಶ್ಯಕ್ಕೆ ನೀಡಲಾಯಿತು.
ಡಾ. ಜಗದೀಶ್ ನಾಯ್ಕ್, ಉದ್ಯಮಿ ಗೋವಿಂದ್ ಗೌಡ, ವಾಸುದೇವ್ ಕಾಮತ, ಸಾಮಾಜಿಕ ಕಾರ್ಯಕರ್ತ ಶ್ರೀರಾಮ್ ಸುರೆ,ಗೋಪಾಲ್ ಗೌಡ ಮತ್ತಿತರರು ನಗದು ಬಹುಮಾನ ನೀಡಿ ಅಭಿನಂದಿಸಿದರು.
ಒಟ್ಟಾರೆ ವಾರಂತ್ಯದ ರಜೆಗೆ ಬಂದ ಪ್ರವಾಸಿಗರಿಗೆ ಸಾಂಪ್ರದಾಯಕ ಈ ಆಚರಣೆಯ ಕುತೂಹಲ ಮೂಡಿಸಿದರೆ, ಸ್ಥಳೀಯ ಜನರಿಗೆ ಈ ವರ್ಷದ ಹೊಸ ರೀತಿಯ. ಪ್ರದರ್ಶನ ಜನರ ಮರಂಜಿಸುತು.
ವಿದೇಶಿಗರು ಭಾಗಿ: ಇಲ್ಲಿ ವಾಸ್ತವ್ಯವಿದ್ದ ಹಲವು ವಿದೇಶಿಗರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಕ್ಷೀಸುವುದರ ಜೊತರ ತಾವು ಕೆಲ ಕಾಲ ಹೆಜ್ಜಾ ಹಾಕಿ ಸಂಭ್ರಮಿಸಿದರು.