
0:00:00
2025-04-14
ಜೊಯಿಡಾ ಗಣೇಶಗುಡಿಯ ರೆಸಾರ್ಟ್ ಈಜುಕೊಳದಲ್ಲಿ 6 ವರ್ಷದ ಬಾಲಕನು ಮರಣ
News Details
ಜೊಯಿಡಾ ತಾಲೂಕಿನ ಗಣೇಶ ಗುಡಿಯ ಬಾಡಗುಂದದ ರೆಸಾರ್ಟಿನ ಈಜುಕೊಳದಲ್ಲಿ 6 ವರ್ಷದ ಬಾಲಕ ಸಾವನಪ್ಪಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗಾವಿಯ ಕುಟುಂಬವೊoದು ಜೊಯಿಡಾ ಪ್ರವಾಸಕ್ಕೆ ಬಂದಿತ್ತು. ಅಶೋಕ ಹೋಂ ಸ್ಟೇ ಎಂಬಲ್ಲಿ ಆ ಕುಟುಂಬವಾಸವಾಗಿತ್ತು. ಹುಸೇನೈನ್ ರಹೀಮ್ ಖಾನ್ ಎಂಬ ಬಾಲಕ ಅಲ್ಲಿನ ಈಜುಕೊಳಕ್ಕೆ ತೆರಳಿದ್ದು, ನೀರಿನಲ್ಲಿ ಮುಳಗಿ ಸಾವನಪ್ಪಿದ ಬಗ್ಗೆ ವರದಿಯಾಗಿದೆ. ನೀರಲ್ಲಿ ಮುಳುಗಿದ ಬಾಲಕನನ್ನು ತಕ್ಷಣ ದಾಂಡೇಲಿ ಆಸ್ಪತ್ರೆಗೆ ತರಲಾಯಿತು. ಆದರೆ, ಪ್ರಯೋಜನವಾಗಲಿಲ್ಲ.