
0:00:00
2025-04-15
ಮೀನುಗಾರಿಕೆಗಾಗಿ ಆಗಮಿಸಿದ್ದ ಬೀರಬಲ್ ನೀರಿಗೆ ಬಿದ್ದು ಸಾವನಪ್ಪಿದ ಘಟನೆ
News Details
ಮೀನುಗಾರಿಕೆಗಾಗಿ ಅಂಕೋಲಾಗೆ ಆಗಮಿಸಿದ್ದ ಛತ್ತಿಸಘಡದ ಬೀರಬಲ್ (24) ಬೋಟಿನಿಂದ ನೀರಿಗೆ ಬಿದ್ದು ಸಾವನಪ್ಪಿದ್ದು, ಮಂಜುಗುಣಿಯಲ್ಲಿ ಅವರ ಶವ ಸಿಕ್ಕಿದೆ.
ಏಪ್ರಿಲ್ 12ರಂದು ಮೀನುಗಾರಿಕೆಗೆ ಹೋಗಿದ್ದ ಬೀರಬಲ್ ಆ ದಿನ ರಾತ್ರಿ ರಾತ್ರಿ 1.30ಕ್ಕೆ ಬೋಟಿನಲ್ಲಿ ಮಲಗಿದ್ದರು. `ಸಿಗಂದೂರು ಚೌಡೇಶ್ವರಿ' ಎಂಬ ಬೋಟಿನಲ್ಲಿ ಅವರು ತಂಗಿದ್ದರು. ರಾತ್ರಿ 11 ಗಂಟೆ ಆಸುಪಾಸಿನಲ್ಲಿ ಅವರು ನೀರಿಗೆ ಬಿದ್ದರು. ಈ ವಿಷಯ ಅರಿತು ಅಲ್ಲಿನವರು ಸಾಕಷ್ಟು ಹುಡುಕಾಟ ನಡೆಸಿದರು. ಆದರೆ, ಆ ವೇಳೆ ಪತ್ತೆ ಆಗಲಿಲ್ಲ. ಏಪ್ರಿಲ್ 14ರಂದು ಮಂಜಗುಣಿ ಬೀಚಿನಲ್ಲಿ ಶವ ಕಾಣಿಸಿತು.