
ನಮ್ಮ ಮನೆಯಲ್ಲಿ ಪ್ರತಿನಿತ್ಯ ಪೂಜಿಸುವ ದೇವರು ಅಂಬೇಡ್ಕರ್ ಆಗಿರಬೇಕು - ಚಂದ್ರಕಾಂತ್ ನಡಿಗೇರ್
News Details
ಆದಿ ಜಾಂಬವಂಥ ಸಂಘಟನೆಯ ಹಾಗೂ ಮಹಾ ನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸೇನೆಯ ಆಶ್ರಯದಲ್ಲಿ ವಿಶ್ವ ರತ್ನ ಭಾರತರತ್ನ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ 135 ವಿಜಯೋತ್ಸವ ಕಾರ್ಯಕ್ರಮವನ್ನು ಆದಿ ಜಾಂಬವಂಥ ಸಂಘದ ಕಚೇರಿಯಲ್ಲಿ ಅದ್ದೂರಿಯಾಗಿ ಆಚರಿಸಿದರು.
ಸಂಘದ ಸಂಸ್ಥಾಪಕರು ರಾಜ್ಯ ಉಪಾಧ್ಯಕ್ಷರು ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನ ಸಮಿತಿಯ ಉಪಾಧ್ಯಕ್ಷರು, ಸದಾ ಶೋಷಿತ ವರ್ಗದ ಪರ ಹೋರಾಟಗಾರರಾಗಿ ಬಡ ಜನರ ಹಕ್ಕುಗಳಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿರುವ ದಾಂಡೇಲಿಯ ಯುವ ನೇತಾರಾದ ಚಂದ್ರಕಾಂತ್ ನಡಿಗೇರ್, ಅವರು ಪೂಜೆ ನಿರ್ವಹಿಸಿ ಮಾತನಾಡಿ ಜಗತ್ತಿನ ಆರಾಧ್ಯ ದೇವರು ಅಂಬೇಡ್ಕರ್ ಅವರು ಹಾಗೂ ಜಗಜೀವನ್ ರಾವ್ ಅವರು, ಇವರು ಶೋಷಿತ ರ್ಗದ ಜನಾಂಗಕ್ಕೆ ನೀಡಿರುವ ತ್ಯಾಗ ಒಂದಲ್ಲ ಎರಡಲ್ಲ ಸಾಕಷ್ಟು ಅದನ್ನು ನಾವು ಅರಿತುಕೊಳ್ಳೋಣ. ಅಂಬೇಡ್ಕರರು ಕಟ್ಟಕಡೆಯ ಸಮಾಜಕ್ಕೂ ಸಮಾನತೆಯ ಹಕ್ಕುಗಳನ್ನು ನೀಡಿದವರು. ಇಂಥಹ ಮಹಾನ್ ನಾಯಕರನ್ನು ನಮ್ಮ ಮನೆಯಲ್ಲಿ ಪ್ರತಿನಿತ್ಯ ಪೂಜಿಸುವ ದೇವರಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರು ಅನಿಲ್ ಕಾಂಬ್ಳೆ, ಸರಸ್ವತಿ ಚೌಹಾನ್, ಆಯುಷ್ಯ ಮುಖಾಸಿ, ರೇಣುಕಾ ಮಾದರ್, ನಿತ್ಯ ಕಾಂಬ್ಳೆ, ಶಕೀಲಾ ಬಾನು, ದತ್ತು ಮಳೆಗೆ, ಸತೀಶ್ ಚೌಹಾಣ್, ಬಸವರಾಜ್ ಹರಿಜನ್, ದ್ಯಾಮಣ್ಣ ಹರಿಜನ್, ಹನುಮಂತಪ್ಪ ಹರಿಜನ್, ಹುಶನ್ ಮಿಯ ಶೋನೂರ್ , ಸುರೇಶ್ ಕೇದಾರಿ, ಶಿವಾಜಿ ಕಾಂಬಳೆ, ಧರ್ಮಣ್ಣ ಭಜಂತ್ರಿ, ಗಣೇಶ್ ಮಾದರ್, ರಾಜೇಶ್ ಕಾಂಬಳೆ, ಮಲ್ಲಿಕಾರ್ಜುನ್ ಹಾಗೂ ಸಂಘದ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.