Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-15

ಸೀತಾರಾಮ ಭಾಗ್ವತ್ ಅವರ ಕಾರು ಅಪಘಾತಕ್ಕೆ ಶಿಕಾರಾದರೂ ಎಲ್ಲರೂ ಸುರಕ್ಷಿತ

News Details

ಕುಮಟಾದ ವ್ಯಾಪಾರಿ ಸೀತಾರಾಮ ಭಾಗ್ವತ್ ಅವರ ಕಾರು ಹೊನ್ನಾವರದಲ್ಲಿ ಅಪಘಾತವಾಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯವಾಗಿಲ್ಲ.

ಕುಮಟಾ ಬಂದರು ರಸ್ತೆಯ ಸೀತಾರಾಮ ಭಾಗ್ವತ್ ಅವರು ಏಪ್ರಿಲ್ 13ರ ರಾತ್ರಿ ಹೊನ್ನಾವರಕ್ಕೆ ಬಂದಿದ್ದರು. ಇಲ್ಲಿನ ಶ್ರೀಕುಮಾರ ಪೆಟ್ರೋಲ್ ಬಂಕ್ ಎದುರು ಅವರು ಕಾರು ತಿರುಗಿಸುವ ಪ್ರಯತ್ನ ಮಾಡಿದರು. ಕಾರಿನ ಇಂಡಿಕೇಟರ್ ಹಾಕಿ ಬಲಕ್ಕೆ ತಿರುಗಿಸುವಾಗ ಹಿಂದಿನಿAದ ಬಂದ ಬುಲೇರೋ ಗುಡ್ಸ್ ಕಾರಿಗೆ ಗುದ್ದಿತು. ಗುದ್ದಿದ ಬುಲೆರೋ ಚಾಲಕ `ತನಗೂ ಇದಕ್ಕೂ ಸಂಬAಧವೇ ಇಲ್ಲ' ಎಂಬAತೆ ವರ್ತಿಸಿದರು. ಕಾರಿನ ಒಳಗಿದ್ದವರಿಗೆ ಏನಾಯಿತು? ಎಂದು ಸಹ ಆತ ಗಮನಿಸಲಿಲ್ಲ. ಬುಲೆರೋ ಸಹ ನಿಲ್ಲಿಸದೇ ಅಲ್ಲಿಂದ ಪರಾರಿಯಾದರು. ಕಾರು ಜಖಂ ಆದ ಕಾರಣ ಸೀತಾರಾಮ ಭಾಗ್ವತ್ ಅವರು ಸಿಟ್ಟಾದರು. ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಅಪರಿಚಿತ ಬುಲೆರೋ ಚಾಲಕನ ವಿರುದ್ಧ ದೂರು ನೀಡಿದರು.