
0:00:00
2025-04-17
ಯಲ್ಲಾಪುರ: ವಲಿಷಾಗಲ್ಲಿಯಲ್ಲಿ ನಾಗರ ಹಾವು ಆತಂಕ, ಉರಗತಜ್ಞ ಅಕ್ಬರ್ ಸೆರೆಹಿಡಿದರು
News Details
ಯಲ್ಲಾಪುರದ ವಲಿಷಾಗಲ್ಲಿಯಲ್ಲಿ ನಾಗರ ಹಾವು ಕಾಣಿಸಿಕೊಂಡು, ಅಲ್ಲಿದ್ದವರ ಆತಂಕ ಹೆಚ್ಚಿಸಿತು. ನಂತರ ಆ ನಾಗರ ಹಾವನ್ನು ಉರಗತಜ್ಞ ಅಕ್ಬರ್ ಸೆರೆ ಹಿಡಿದರು.
ಇಲಿಯನ್ನು ಬೆನ್ನಟ್ಟಿ ಬಂದ ನಾಗರ ಹಾವು ರಫೀಕ್ ಅವರ ಮನೆಯೊಳಗೆ ನುಸುಳಿ ಅಲ್ಲಿದ್ದವರ ಆತಂಕಕ್ಕೆ ಕಾರಣವಾಯಿತು. ರಫೀಕ್ ಕುಟುಂಬದವರು ಮನೆಯೊಳಗೆ ಹಾವು ನುಗ್ಗಿರುವ ಬಗ್ಗೆ ಅಕ್ಕ-ಪಕ್ಕದವರಿಗೆ ಮಾಹಿತಿ ನೀಡಿದರು. ಹಾವು ನೋಡಲು ಜನ ಜಮಾಯಿಸಿದ್ದು, ಅಲ್ಲಿದ್ದ ಒಬ್ಬರು ಉರಗ ತಜ್ಞ ಅಕ್ಬರ್ ಅವರಿಗೆ ಫೋನ್ ಮಾಡಿದರು.
ಮನೆ ಹಿಂದೆ ಅಡಗಿದ್ದ ಹಾವನ್ನು ಅಕ್ಪರ್ ಅವರು ಉಪಾಯವಾಗಿ ಹಿಡಿದರು `ಹಾವು ಯಾರಿಗೂ ಅನಗತ್ಯವಾಗಿ ತೊಂದರೆ ಮಾಡುವುದಿಲ್ಲ. ಹೀಗಾಗಿ ಭಯಪಡುವುದು ಬೇಡ' ಎಂದು ಅಕ್ಬರ್ ಅಲ್ಲಿದ್ದವರಿಗೆ ಮನವರಿಕೆ ಮಾಡಿದರು. ನಾಗರ ಹಾವನ್ನು ಹಿಡಿದ ಅವರು ಹಾವಿನ ವಿಶೇಷತೆಗಳ ಬಗ್ಗೆ ನೆರೆದಿದ್ದವರಿಗೆ ಪರಿಚಯಿಸಿದರು.
ಅಲ್ಲಿ ನೆರೆದಿದ್ದ ಮಹಿಳೆ-ಮಕ್ಕಳಿಗೂ ಹಾವಿನ ಗುಣಧರ್ಮಗಳನ್ನು ಪರಿಚಯಿಸಿದರು. ಅದಾದ ನಂತರ ಹಾವನ್ನು ಚೀಲದಲ್ಲಿ ತುಂಬಿ ಸಮೀಪದ ಕಾಡಿಗೆ ಬಿಟ್ಟರು.