Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-19

ಮದುವೆಗೆ ಹೊರಟ ಮಹಿಳೆ ಮತ್ತು ಇಬ್ಬರು ಮಕ್ಕಳು ಕಾಣೆ

News Details

ಮದುವೆಗೆ ಹೋಗಬೇಕಿದ್ದ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ. ಆ ಮಹಿಳೆ ಜೊತೆ ಇಬ್ಬರು ಮಕ್ಕಳು ಕಾಣಿಸುತ್ತಿಲ್ಲ. ಶಿರಸಿ ಪೊಲೀಸರು ಮಹಿಳೆ ಹಾಗೂ ಮಕ್ಕಳ ಹುಡುಕಾಟ ನಡೆಸಿದ್ದಾರೆ.

ಶಿರಸಿ ಗಣೇಶನಗರದ ಮಾರುತಿಗಲ್ಲಿಯಲ್ಲಿ ಜ್ಯೋತಿ ಭೋವಿವಡ್ಡರ್ (32) ಅವರು ತಮ್ಮ ಕುಟುಂಬದ ಜೊತೆ ವಾಸವಾಗಿದ್ದರು. ಸಂಬAಧಿಕರ ಮದುವೆಗಾಗಿ ಅವರು ಸಿದ್ಧತೆ ಮಾಡಿಕೊಂಡಿದ್ದು, ಏಪ್ರಿಲ್ 17ರಂದು ಇಬ್ಬರು ಮಕ್ಕಳ ಜೊತೆ ಮನೆ ಬಿಟ್ಟಿದ್ದರು. `ಮಳಗಿಗೆ ಹೋಗಿ ಬರುವೆ' ಎಂದು ಪತಿ ಹನುಮಂತ ಭೋವಿವಡ್ಡರ್ ಅವರ ಬಳಿ ಹೇಳಿದ್ದರು.

ಆದರೆ, ಜ್ಯೋತಿ ಅವರು ಮದುವೆ ಮನೆಗೆ ತಲುಪಿಲ್ಲ. 13ವರ್ಷದ ಮಗ ಹಾಗೂ 10 ವರ್ಷದ ಮಗಳ ಜೊತೆ ಹೊರಟ ಅವರು ಎಲ್ಲಿ ಹೋದರು? ಎಂದು ಗೊತ್ತಾಗಲಿಲ್ಲ. ದಿನ ಕಳೆದರೂ ಅವರು ಮನೆಗೆ ಮರಳಿ ಬರಲಿಲ್ಲ. ಹೀಗಾಗಿ ಹನುಮಂತ ಭೋವಿವಡ್ಡರ್ ಅವರು ಎಲ್ಲಾ ಕಡೆ ಹುಡುಕಿದರು. ಆದರೆ, ಯಾವುದೇ ಸುಳಿವು ಸಿಗಲಿಲ್ಲ.

ಪತ್ನಿ ಹಾಗೂ ಇಬ್ಬರು ಮಕ್ಕಳು ಕಾಣೆಯಾಗಿರುವ ಬಗ್ಗೆ ಹನುಮಂತ ಭೋವಿವಡ್ಡರ್ ಅವರು ಪೊಲೀಸರ ಮೊರೆ ಹೋದರು. ಪೊಲೀಸರು ಸಹ ಆ ಮೂವರ ಹುಡುಕಾಟ ನಡೆಸಿದ್ದಾರೆ. ಜ್ಯೋತಿ ಹಾಗೂ ಅವರ ಇಬ್ಬರು ಮಕ್ಕಳು ಕಾಣಿಸಿದರೆ ಇಲ್ಲಿ ಫೋನ್ ಮಾಡಿ: 9480805264