
ಶಿರಸಿಯ ಗುತ್ತಿಗೆದಾರ ಆತ್ಮಹತ್ಯೆ
News Details
ಜೀವನದಲ್ಲಿ ಜಿಗುಪ್ಸೆ ಹೊಂದಿದ ಶಿರಸಿಯ ಗುತ್ತಿಗೆದಾರ ಅಬ್ದುಲ್ ಬಶೀರ ಶೇಖ್ (57) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿರಸಿ ಇಂದಿರಾನಗರದಲ್ಲಿ ಅವರು ವಾಸವಾಗಿದ್ದರು. ಈಚೆಗೆ ಬೇಸರದಲ್ಲಿರುತ್ತಿದ್ದ ಅವರು `ನನಗೆ ಈ ಜೀವನ ಬೇಡ' ಎಂದು ಹೇಳಿಕೊಳ್ಳುತ್ತಿದ್ದರು. ಇದನ್ನು ಅರಿತ ಅವರ ಮಗ ರಶೀದ ಶೇಖ್ ಸಮಾಧಾನ ಮಾಡಿದ್ದರು. ಈ ನಡುವೆ ಏಪ್ರಿಲ್ 3ರಂದು ಶಿರಸಿ ಕೆರೆಕೊಪ್ಪದಲ್ಲಿನ ಅಕ್ಕನ ಮಗಳ ಮನೆಗೆ ಹೋಗಿದ್ದರು. ಅಲ್ಲಿ ಫರ್ಜಾನ್ ಅಬ್ದುಲ್ ಕರೀಂ ಅವರ ಮನೆಗೆ ಭೇಟಿ ನೀಡಿದ್ದರು.
ಆ ಪ್ರದೇಶದಲ್ಲಿ ಮನೆ ಕಟ್ಟುವ ಕೆಲಸ ನೋಡುತ್ತಿದ್ದ ಅಬ್ದುಲ್ ಬಶೀರ ಶೇಖ್ ಅವರಿಗೆ ಹೊಸಮನೆಯ ನೆಲಕ್ಕೆ ಹಾಕಲು ತಂದಿದ್ದ ಕ್ರಿಮಿನಾಶಕ ಕಾಣಿಸಿತು. ಕೂಡಲೇ ಅದನ್ನು ಸೇವಿಸಿ ಅಸ್ವಸ್ಥರಾದರು. ಅಬ್ದುಲ್ ಬಶೀರ ಶೇಖ್ ಅವರನ್ನು ರೋಟರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅದಾದ ನಂತರ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಲ್ಲಿ ಚೇತರಿಕೆ ಕಾಣದ ಕಾರಣ ಏಪ್ರಿಲ್ 18ರಂದು ಮತ್ತೆ ಶಿರಸಿಗೆ ಕರೆತರುವಾಗ ಉಸಿರಾಟದ ಸಮಸ್ಯೆ ಕಾಣಿಸಿತು. ಕೂಡಲೇ ಅವರನ್ನು ಕುಟುಂಬದವರು ಶಿರಸಿ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಆದರೆ, ಅಷ್ಟರೊಳಗೆ ಅಬ್ದುಲ್ ಬಶೀರ ಶೇಖ್ ಸಾವನಪ್ಪಿದ್ದರು.