
ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ ಹಾಗೂ ಮಾರ್ಷಲ್ ಆರ್ಟ್ ತರಬೇತಿ ಶಿಬಿರದಲ್ಲಿ ಶಿರಸಿ - ಸಿದ್ದಾಪುರ ಚಾಂಪಿಯನ್ಸ್ ಡೊಜೊ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ಅತ್ಯುತ್ತಮ ಪ್ರದರ್ಶನ. ಉತ್ತರ ಕನ್ನಡ ಜಿಲ್ಲೆಗೆ ಚಾಂಪಿಯನ್ಸ್ ಟ್ರೋಫಿ
News Details
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶ್ರೀ ಕ್ಷೇತ್ರ ಮಹಾಕೂಟದಲ್ಲಿ ಸೀಶಿಂಕೈ ಶಿಟೋರಿಯೋ ಕರಾಟೆ ಡೊ ಫೆಡರೇಷನ್ ಒಫ್ ಕರ್ನಾಟಕ ಇವರು ಆಯೋಜಿಸಿದ ಏಳನೇ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ ಹಾಗೂ ಮಾರ್ಷಲ್ ಆರ್ಟ್ ತರಬೇತಿ ಶಿಬಿರದಲ್ಲಿ ಶಿರಸಿ - ಸಿದ್ದಾಪುರ ಚಾಂಪಿಯನ್ಸ್ ಡೊಜೊ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಜಿಲ್ಲೆಗೆ ಚಾಂಪಿಯನ್ಸ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
ತರಬೇತಿ ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದ ವಿದ್ಯಾರ್ಥಿಯಾದ ಬಿಳೂರು ತರಬೇತಿ ಕೇಂದ್ರದ ಪ್ರೀತಮ್ ನಾಯ್ಕ, ಶಿರಸಿ ತರಬೇತಿ ಕೇಂದ್ರದ ಮೃದುಲ ಜಾರ್ಜ್ ಹಾಗೂ ಮಿತೇಶ್ ಬಿ , ಸಿದ್ದಾಪುರ ತರಬೇತಿ ಕೇಂದ್ರದ ಹರ್ಷಿತ್ ನಾಯ್ಕ ಇವರುಗಳು ಉತ್ತಮ ಉತ್ತಮ ಪ್ರದರ್ಶನ ಪ್ರಶಸ್ತಿಯನ್ನು ಪಡೆದುಕೊಂಡರು.
ಹಾಗೆಯೆ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಪದಕ ಪಡೆದ ವಿದ್ಯಾರ್ಥಿಗಳು
*ಬಿಳೂರು ತರಬೇತಿ ಕೇಂದ್ರದ ವಿದ್ಯಾರ್ಥಿಗಳಾದ :-*
ಪ್ರಜ್ವಲ್ ನಾಯ್ಕ್ = ಕುಮಿಟೆ ಯಲ್ಲಿ 1 ಕಂಚಿನ ಪದಕ
ಪ್ರೀತಮ್ ನಾಯ್ಕ್ = ಕುಮಿಟೆ ಯಲ್ಲಿ 1 ಬಂಗಾರದ ಪದಕ
ನಿಶಾಂತ್ ನಾಯ್ಕ್ = ಕುಮಿಟೆ ಯಲ್ಲಿ 1 ಕಂಚಿನ ಪದಕ...
*ಶಿರಸಿ ತರಬೇತಿ ಕೇಂದ್ರದ ವಿದ್ಯಾರ್ಥಿಗಳಾದ :-*
ನಭನ್ಯು = ಕುಮಿಟೆ ಯಲ್ಲಿ 1 ಬೆಳ್ಳಿ ಪದಕ
ಮೃದುಲಾ ಜಾರ್ಜ್ = ಕಥಾ ದಲ್ಲಿ 1 ಬೆಳ್ಳಿ ಪದಕ
ಮದನ್ ಭಟ್ = ಕಥಾ ದಲ್ಲಿ 1 ಕಂಚಿನ ಪದಕ
*ಸಿದ್ದಾಪುರ ತರಬೇತಿ ಕೇಂದ್ರದ ವಿದ್ಯಾರ್ಥಿಗಳಾದ :-*
ಗಣೇಶ್ ಕೋಡಿಯ = ಕುಮಿಟೆ ಯಲ್ಲಿ 1 ಕಂಚಿನ ಪದಕ
ಆಯುಷ್ ಕೋಡಿಯ = ಕಥಾದಲ್ಲಿ 1 ಕಂಚಿನ ಪದಕ & ಕುಮಿಟೆ ಯಲ್ಲಿ 1 ಬೆಳ್ಳಿ ಪದಕ
ಆಶಯ್ ಕೋಡಿಯ = ಕುಮಿಟೆ ಯಲ್ಲಿ 1 ಬೆಳ್ಳಿ ಪದಕ
ಆಶಿತಾ ಮೆಸ್ತಾ = ಕುಮಿಟೆ ಯಲ್ಲಿ 1 ಬೆಳ್ಳಿ ಪದಕ & ಕಥಾ ದಲ್ಲಿ 1 ಕಂಚಿನ ಪದಕ
ಹರ್ಷಿತ್ ನಾಯ್ಕ್ = ಕುಮಿಟೆ ಯಲ್ಲಿ 1 ಕಂಚಿನ ಪದಕ
ಧಕ್ಷ ಠಾಕೂರ್ = ಕಥಾದಲ್ಲಿ 1 ಕಂಚಿನ ಪದಕ
ಆರ್ಯನ್ ನಾಯ್ಕ್ = ಕುಮಿಟೆ ಯಲ್ಲಿ 1 ಬಂಗಾರದ ಪದಕ & ಕಥಾ ದಲ್ಲಿ 1 ಬೆಳ್ಳಿ ಪದಕವನ್ನು ಗೆದ್ದು ಜಯಶಾಲಿ ಯಾಗಿದ್ದಾರೆ.
ಇವರುಗಳ ಸಾಧನೆಗೆ ಜಿಲ್ಲೆಯ ಮುಖ್ಯ ತರಬೇತುದಾರರಾದ ಆನಂದ ನಾಯ್ಕ, ತಾಲೂಕಿನ ಗಣ್ಯರು , ವಿದ್ಯಾರ್ಥಿಗಳ ಪಾಲಕರುಗಳು ಹರ್ಷವ್ಯಕ್ತ ಪಡಿಸಿದ್ದಾರೆ.