
ತಾಲೂಕ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಚಂದ್ರಶೇಖರ ಎಚ್ ನಾಯ್ಕ್ ಕುಂಬ್ರಿಗದ್ದೆ
News Details
ಸಿದ್ದಾಪುರ : ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ಮುಂದಿನ ಎರಡು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಚಂದ್ರಶೇಖರ ಎಚ್ ನಾಯ್ಕ್ ಕುಂಬ್ರಿಗದ್ದೆ (ಬೇಡ್ಕಣಿ ) ಇವರಿಗೆ ಕನ್ನಡ ಧ್ವಜ ನೀಡುವ ಮೂಲಕ ಅಧಿಕಾರ ವಹಿಸಿಕೊಡಲಾಯಿತು. ಈ ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಗೋಪಾಲ ನಾಯ್ಕ್ ಭಾಶಿ ರವರು ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಗೋಪಾಲ ಭಾಷಿ ಮಾತನಾಡಿ ಮೂರು ವರ್ಷಗಳ ಕಾಲ ಸಾಹಿತ್ಯ ಪರಿಷತ್ ನಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಮತ್ತು ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಗೋಪಾಲ ಬಾಶಿ ಅವರಿಗೆ ಶಾಲುಹೊದಸಿ ಹಾರ ಹಾಕಿ ಅಭಿನಂದಿಸಿದರು ಹಾಗೂ ನೂತನ ಅಧ್ಯಕ್ಷ ಚಂದ್ರಶೇಖರ ರವರಿಗೆ ಶಾಲು ಹಾಕಿ ಪುಷ್ಪ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಎಂ ಕೆ ನಾಯ್ಕ್ ಹೊಸಳ್ಳಿ ತಮ್ಮಣ್ಣ ಬೀಗಾರ, ಪಿ.ಬಿ ಹೊಸೂರ್, ಪ್ರಶಾಂತ ಶೇಟ್, ಕನ್ನೇಶ್ ನಾಯ್ಕ್, ಡಿ.ಜಿ ಪೂಜಾರಿ, ಅಣ್ಣಪ್ಪ ಶಿರಳಗಿ, ಸುಧಾರಾಣಿ ನಾಯ್ಕ್, ಉಷಾ ನಾಯ್ಕ್, ಆಜಾದ್, ಶಂಕರಮೂರ್ತಿ, ಕೃಷ್ಣಮೂರ್ತಿ ಐಸೂರ್, ರತ್ನಾಕರ ನಾಯ್ಕ್, ಜಿ ಜಿ ಹೆಗಡೆ, ಆರ್ ಎಚ್ ಪಾಲೇಕರ್, ಸಿ ಎಸ್ ಗೌಡರ್, ದಿವಾಕರ ಸಂಪಖಂಡ, ಯಶವಂತ ತ್ಯಾರ್ಸಿ, ನಾಗರಾಜ ಮಾಳ್ಕೋಡ್, ಮಂಜುನಾಥ ಭಟ್ ಪ್ರಶಾಂತ ಹೆಗಡೆ , ಕೆ. ಟಿ. ಕೊಂಡ್ಲಿ ಉಪಸ್ಥಿತರಿದ್ದರು.