
0:00:00
2025-04-21
ಸಿದ್ದಾಪುರದ ಮಂಡಗಳಲೆ ಮತ್ತು ಹಸರಗೋಡಿನ ಹೊಸಗದ್ದೆಯಲ್ಲಿ ಮದ್ಯ ಮಾರಾಟದ ವಿರುದ್ಧ ಪೋಲಿಸರ ಕ್ರಮ
News Details
ಸಿದ್ದಾಪುರದ ಮಂಡಗಳಲೆ ಜಗನ್ನಾಥ ಮಡಿವಾಳ ಹಾಗೂ ಹಸರಗೋಡಿನ ಹೊಸಗದ್ದೆಯ ವೆಂಕಟೇಶ ನಾಯ್ಕ ತಮ್ಮ ಮನೆಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು, ಪೊಲೀಸರು ಅದನ್ನು ತಡೆದಿದ್ದಾರೆ.
ಸಿಪಿಐ ಜೆಬಿ ಸೀತಾರಾಮ ಅವರು ವೆಂಕಟೇಶ ನಾಯ್ಕ ಅವರ ಮನೆ ಮೇಲೆ ದಾಳಿ ನಡೆಸಿದಾಗ ಮನೆ ಮುಂದೆ ಸಾರ್ವಜನಿಕರಿಗೆ ಸರಾಯಿ ವಿತರಿಸುತ್ತಿರುವುದು ಕಾಣಿಸಿತು. ಮನೆಯೊಳಗೆ ವಿವಿಧ ಮದ್ಯದ ಪ್ಯಾಕೇಟುಗಳು ಇದ್ದವು. ಆದರೆ, ಮದ್ಯ ಮಾರಾಟಕ್ಕೆ ಅನುಮತಿ ಪತ್ರ ಮಾತ್ರ ಸಿಗಲಿಲ್ಲ. ಪಿಎಸ್‌ಐ ಅನೀಲ ಬಿ ಎಂ ಅವರು ಜಗನ್ನಾಥ ಮಡಿವಾಳ ಅವರ ಮನೆ ಬಳಿ ತೆರಳಿದಾಗಲೂ ಅಲ್ಲಿ ಕೆಲವರು ಮದ್ಯ ಸೇವನೆಯಲ್ಲಿ ನಿರತರಾಗಿದ್ದರು. ಅವರ ಮನೆಯಲ್ಲಿಯೂ ಸರಾಯಿ ಪ್ಯಾಕೆಟ್ ಸಿಕ್ಕಿದವು. ಈ ಹಿನ್ನಲೆ ಪೊಲೀಸರು ಆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದರು.