
0:00:00
2025-04-21
ಪరీక్షೆಗೆ ಜನಿವಾರ ಅಡ್ಡಿಯಾಗದು: ಸೋಂದಾ ಸ್ವರ್ಣವಲ್ಲಿಯ ಸ್ವಾಮೀಜಿ ವಾಗ್ದಾನ
News Details
ಜನಿವಾರ ಧರಿಸುವುದು ಕಾನೂನುಬಾಹಿರವಲ್ಲ. ಜನಿವಾರ ಧರಿಸುವುದರಿಂದ ಯಾವುದೇ ಪರೀಕ್ಷಾ ನಿಯಮಗಳಿಗೆ ಧಕ್ಕೆಯಾಗುವುದಿಲ್ಲ. ಅದಾಗಿಯೂ ಬಿದರ್ ಹಾಗೂ ಶಿವಮೊಗ್ಗದಲ್ಲಿ ಜನಿವಾರ ಧರಿಸಿದ ವಿದ್ಯಾರ್ಥಿಗಳ ಪರೀಕ್ಷೆಗೆ ಅಡ್ಡಿಪಡಿಸಿದ್ದು ಸರಿಯಲ್ಲ' ಎಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ.
`ಬ್ರಾಹ್ಮಣರು ಧರಿಸಿದ ಜನಿವಾರ ವಿಷಯವಾಗಿ ಅಧಿಕಾರಿಗಳು ನಡೆದುಕೊಂಡ ರೀತಿ ಖಂಡನೀಯ. ಭಾರತೀಯ ಸಂವಿಧಾನ ಪ್ರತಿಯೊಬ್ಬರಿಗೂ ಅವರವರ ಧರ್ಮ ಆಚರಣೆಗೆ ಅವಕಾಶ ನೀಡಿದೆ. ಹೀಗಿರುವಾಗ ಜನಿವಾರ ಧರಿಸುವುದು ಪರೀಕ್ಷಾ ನಿಯಮಗಳಿಗೆ ಅಡ್ಡಿಯಾಗುವುದಿಲ್ಲ' ಎಂದು ಶ್ರೀಗಳು ಹೇಳಿದ್ದಾರೆ.
`ಸರ್ಕಾರಿ ಅಧಿಕಾರಿಗಳು ಜವಾಬ್ದಾರಿ ಸ್ಥಾನದಲ್ಲಿರುತ್ತಾರೆ. ಅವರು ಎಲ್ಲರನ್ನು ಸರಿಸಮಾನವಾಗಿ ನೋಡಬೇಕು. ಜನಿವಾರವನ್ನು ಮುಂದಿಟ್ಟುಕೊAಡು ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವ ಕೆಲಸ ಮಾಡಿದ್ದು ಸರಿಯಲ್ಲ' ಎಂದು ಅವರು ಅಭಿಪ್ರಾಯ ಹಂಚಿಕೊ0ಡಿದ್ದಾರೆ.