
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯನ್ನು ಅಮಾನತು ಮಾಡುವಂತೆ ಕಾಂಗ್ರೇಸ್ ಮುಖಂಡರ ಆಗ್ರಹ.
News Details
ಸಿದ್ದಾಪುರ : ಪಟ್ಟಣದಲ್ಲಿರುವ ಸಿ ಆರ್ ಹಾಲ್ ಜಾಗವನ್ನ ತಮಿಳು ನಾಡು ಮೂಲದ ಅಂಗಡಿಕಾರರಿಗೆ ಸಿದ್ದಾಪುರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಜೆ.ಆರ್ ನಾಯ್ಕ ರವರು ಫೆಬ್ರವರಿ 26 ರಂದು ಫೋನ್ ಪೆ ಮೂಲಕ ಹತ್ತು ಸಾವಿರ ಹಣ ಪಡೆದು ಆ ಜಾಗವನ್ನು ಅನಧಿಕೃತವಾಗಿ ಬಾಡಿಗೆ ನೀಡಿದ್ದು, ನ್ಯಾಯಾಲಯ ನೀಡಿದ ಆದೇಶಕ್ಕೆ ವಿರುದ್ಧವಾಗಿ ಬಾಡಿಗೆಗೆ ನೀಡಿ ನ್ಯಾಯಾಲಯಕ್ಕೆ ಅಗೌರವ ಮತ್ತು ನಿಂದನೆ ಮಾಡಿ ಕಾನೂನು ಬಾಹಿರ ಚಟುವಟಿಕೆ ಮಾಡಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯನ್ನು ಈ ಕೂಡಲೇ ಅಮಾನತು ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ನವರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹ ಮಾಡಿದರು. ಬಾಲಿಕೊಪ್ಪ ಗ್ರಾಮದ ಸರ್ವೆ ನಂಬರ್ 267/ಬ2 ಜಾಗವು 1950 ರಿಂದ ಬ್ಲಾಕ್ ಕಾಂಗ್ರೆಸ್ ಸಿದ್ದಾಪುರ ಅಧ್ಯಕ್ಷರ ಹೆಸರಿಗೆ ಇದ್ದ ಒಂದು ಎಕರೆ ಜಾಗವನ್ನ 2013ರಲ್ಲಿ ಬಿಜೆಪಿ ಸರ್ಕಾರವು ಅನಧಿಕೃತವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರ ಕನ್ನಡಕ್ಕೆ ನೀಡಿತ್ತು. ಈ ಕುರಿತು ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ನವರು ನ್ಯಾಯಾಲಯದಲ್ಲಿ ದಾವೆ ಹೂಡಿ ಅಗತ್ಯ ದಾಖಲೆ ಪೂರೈಸಿದ್ದರು, ಈಗ ಈ ಜಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹೆಸರಿಗೆ ಹಸ್ತಾಂತರಿಸುವಂತೆ ಹೈಕೋರ್ಟ್ 2023 ರಂದು ಆದೇಶ ನೀಡಿತ್ತು, ಆದರೂ ಸಹ ಸಿದ್ದಾಪುರ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಜೆ ಆರ್ ನಾಯ್ಕ್ ರವರು 10,000 ಫೋನ್ ಪೇ ಮೂಲಕ ಪಡೆದುಕೊಂಡು ಜಾಗವನ್ನು ಅನಧಿಕೃತವಾಗಿ ಬಾಡಿಗೆ ನೀಡಿ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡು ಅಗೌರವ ಮತ್ತು ನಿಂದನೆ ಮಾಡಿರುತ್ತಾರೆ ಎಂದು ಆರೋಪಿಸಿ ನ್ಯಾಯಾಲಯದ ಆದೇಶ ವಿರೋಧಿಸಿ ಮತ್ತು ಕಾನೂನು ಬಾಯರ ಚಟುವಟಿಕೆ ಮಾಡಿದ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತಹಶೀಲ್ದಾರರಿಗೆ ಮನವಿ ನೀಡಿದರು. ನಂತರ ಕಾನೂನು ಕ್ರಮಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ರವರಿಗೆ ದೂರು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿ ಎನ್ ನಾಯ್ಕ್, ಬ್ಲಾಕ್ ಮಹಿಳಾ ಅಧ್ಯಕ್ಷೆ ಸೀಮಾ ಹೆಗಡೆ, ನಗರ ಘಟಕ ಅಧ್ಯಕ್ಷ ಮಾರುತಿ ಕಿಂದ್ರಿ, ದೊಡ್ಮನೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಹೆಗಡೆ, ಕ್ಯಾದಗಿ ಗ್ರಾಮ ಪಂಚಾಯತ್ ಸದಸ್ಯೆ ಶಾಂತಲಾ ನಾಯ್ಕ್, ಪಟ್ಟಣ ಪಂಚಾಯತ್ ನಾಮ ನಿರ್ದೇಶಿತ ಸದಸ್ಯ ಕೆ ಟಿ ಹೊನ್ನೇಗುಂಡಿ, ಇಟಗಿ ಗ್ರಾಮ ಪಂಚಾಯತ್ ಸದಸ್ಯ ಸುರೇಂದ್ರ ಮಡಿವಾಳ, ಪ್ರಮುಖರಾದ ಗಾಂಧೀಜಿ ನಾಯ್ಕ್, ಲಕ್ಷಣ ನಾಯ್ಕ, ಜನಾರ್ಧನ್ ನಾಯ್ಕ್, ಹರೀಶ ನಾಯ್ಕ್, ಮಂಜುನಾಥ ಹೆಗಡೆ , ಅಣ್ಣಪ್ಪ, ಜಿ ಸಿ ನಾಯ್ಕ್, ಸಂತೋಷ, ರವಿ ಕೊಠಾರಿ ಮತ್ತಿತರರು ಉಪಸ್ಥಿತರಿದ್ದರು. Box 1950 ರಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹೆಸರಿಗೆ ಇದ್ದ ಜಾಗವನ್ನು 2013ರಲ್ಲಿ ಬಿಜೆಪಿ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಸರಿಗೆ ಮಾಡುತ್ತದೆ ನಾವು ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ದಾವೆ ಹೂಡಿದ್ದೆವು ಅಗತ್ಯ ದಾಖಲೆ ಒದಗಿಸಿ ನ್ಯಾಯಾಲಯವು ಬ್ಲಾಕ್ ಅಧ್ಯಕ್ಷರ ಹೆಸರಿಗೆ ಮಾಡುವಂತೆ ಆದೇಶ ಮಾಡಿದೆ, ದಾಖಲೆ ನಮ್ಮ ಬಳಿ ಇದೆ ಅಧಿಕಾರಿಗಳು ನಮ್ಮ ಹೆಸರಿಗೆ ಮಾಡಿಕೊಡದೆ ವಿಳಂಬ ಮಾಡುತ್ತಿದ್ದಾರೆ ಕೂಡಲೇ ಕೋರ್ಟ್ ಆದೇಶದಂತೆ ಅಧಿಕಾರಿಗಳು ನಮ್ಮ ಹೆಸರಿಗೆ ಮಾಡಿಕೊಡಬೇಕು, ತಮ್ಮದಲ್ಲದ ಜಗವನ್ನ ಸಿದ್ದಾಪುರ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಬಾಡಿಗೆಗೆ ಕೊಟ್ಟಿದ್ದಾರೆ, ಅಂಗಡಿ ಕಾರರಿಂದ ಫೋನ್ ಪೆ ಮಾಡಿಸಿಕೊಂಡು ನ್ಯಾಯಾಲಯದ ಆದೇಶವನ್ನು ವಿರೋಧಿಸಿ ಚಟುವಟಿಕೆ ನಡೆಸಿದ್ದಾರೆ ಕೂಡಲೇ ತನಿಖೆ ಮಾಡಿ ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ಅಮಾನತ್ತು ಮಾಡಬೇಕು. ವಸಂತ ನಾಯ್ಕ್ ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ