
ರಿಕ್ಕಿ ರೈ ಮೇಲೆ ಹಲ್ಲೆ: ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮಕ್ಕೆ ಜಯ ಕರ್ನಾಟಕ ಒತ್ತಾಯ
News Details
ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. `ದುಷ್ಕರ್ಮಿಗಳನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಿ' ಎಂದು ಜಯ ಕರ್ನಾಟಕ ಯಲ್ಲಾಪುರ ಘಟಕದವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
`ಏಪ್ರಿಲ್ 18ರಂದು ರಾತ್ರಿ ರಿಕ್ಕಿ ರೈ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ರಿಕ್ಕಿ ರೈ ಅವರ ಕೊಲೆ ಪ್ರಯತ್ನ ನಡೆದಿದ್ದು, ಅವರಿಗೆ ಸರ್ಕಾರ ರಕ್ಷಣೆ ಒದಗಿಸಬೇಕು' ಎಂದು ಜಯ ಕರ್ನಾಟಕದ ಯಲ್ಲಾಪುರ ತಾಲೂಕು ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಸರ್ಕಾರಕ್ಕೆ ಪತ್ರ ರವಾನಿಸಿದ್ದಾರೆ. `ಬಿಡದಿಯಲ್ಲಿರುವ ರಿಕ್ಕಿ ರೈ ಅವರ ಮನೆ ಮೇಲೆ ದಾಳಿ ನಡೆದಿದೆ. ಹೀಗಾಗಿ ಅವರ ಮನೆಗೂ ಸೂಕ್ತ ಭದ್ರತೆ ಒದಗಿಸಬೇಕು' ಎಂದು ಆಗ್ರಹಿಸಿದ್ದಾರೆ.
ಯಲ್ಲಾಪುರ ತಹಶೀಲ್ದಾರ್ ಕಚೇರಿ ಎದುರು ಜಮಾಯಿಸಿದ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಈ ಬಗ್ಗೆ ಗೃಹ ಸಚಿವರು ಹಾಗೂ ರಾಜ್ಯಪಾಲರಿಗೆ ಮನವಿ ರವಾನಿಸಿದರು. ಪ್ರಮುಖರಾದ ಚೆನ್ನಪ್ಪ ಡಿ ಎಚ್, ಎ ಎಫ್ ಕಾಂಬಲೇಕರ್, ಪರಶುರಾಮ ತಿರುಕಪ್ಪನವರ್, ಸುಭಾಶ ಡಿ ಎಚ್, ಅಲೆಕ್ಸ ಸಿದ್ದಿ, ಶಾಂತರಾಮ ಸಾವಂತ, ಜೀವಾ ಕೈಟ್ಕರ್, ಸಾದಿಕ್ ಖಾಜಿ, ರಜಬಲಿ ಒಂಟಿ, ಇಮಾಮ ಕಣವಿ, ಬಾಬು ಪಾಟೀಲ, ಸಾವೇರ್ ಸಿದ್ದಿ, ಗಣಪತಿ ಶಿರನಾಳಕರ, ಅಲಿ ಖುರೇಶಿ, ಹನುಮಂತ ವಡ್ಡರ್, ಪರಶುರಾಮ ಹರಿಜನ, ಮಂಜುನಾಥ ರಾಯ್ಕರ್, ಫಾತಿಮಾ ಶೇಖ್, ಫಾತೀಮಾ ದರವೇಶ ಇತರರು ಇದ್ದರು.