
ಕಾರವಾರದಲ್ಲಿ ಮಾಜಿ ನಗರಸಭೆ ಸದಸ್ಯರ ಕೊಲೆ ಪ್ರಕರಣ: ಆರೋಪಿ ನಿತೇಶ್ ತಾಂಡೇಲ್ ಬಂಧನ
News Details
ಕಾರವಾರ ನಗರಸಭೆ ಮಾಜಿ ಸದಸ್ಯ ಸತೀಶ ಕೋಳಂಬಕರ್ ಕೊಲೆ ಮಾಡಿದ ಆರೋಪಿಗಳ ಪೈಕಿ ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರವಾರದ ನಿತೇಶ್ ತಾಂಡೇಲ್ ಬಂಧಿತ ವ್ಯಕ್ತಿ.
ಸತೀಶ ಕೋಳಂಬಕರ್ ಕೊಲೆ ನಂತರ ನಿತೇಶ್ ತಾಂಡೇಲ್ ಗೋವಾಗೆ ಪರಾರಿಯಾಗಿದ್ದು, ಸತೀಶ್ ಕೋಳಂಬಕರ್ ಅವರ ಪುತ್ರಿ ನೀಡಿದ ಮಾಹಿತಿ ಅನ್ವಯ ಆರೋಪಿಗಾಗಿ ಹುಡುಕಾಟ ನಡೆದಿತ್ತು. ಗೋವಾದ ಕಡಲ ತೀರದ ಹೊಟೇಲ್ ಒಂದರಲ್ಲಿ ಅವಿತುಕೊಂಡಿದ್ದ ನಿತೀಶ್ ತಾಂಡೇಲರನ್ನು ಮಂಗಳವಾರ ಪೊಲೀಸರು ವಶಕ್ಕೆಪಡೆದು ಕಾರವಾರಕ್ಕೆ ಕರೆತಂದಿದ್ದಾರೆ.
ಭಾನುವಾರ ಬೆಳಗ್ಗೆ ಕಾರವಾರದಲ್ಲಿ ಸತೀಶ ಕೋಳಂಬಕರ್ ಕೊಲೆ ನಡೆದಿತ್ತು. ಅದಕ್ಕಿಂತ ಕೆಲ ದಿನಗಳ ಮೊದಲು ಸತೀಶ ಕೋಳಂಬಕರ್ ಮೇಲೆ ಹಲ್ಲೆಯೂ ಆಗಿತ್ತು. ಸತೀಶ ಕೋಳಂಬಕರ್ ಒಡೆತನದ ಮಳಿಗೆಯನ್ನು ನಿತೀಶ್ ತಾಂಡೇಲ್ ಬಾಡಿಗೆಗೆ ಪಡೆದಿದ್ದು, ವ್ಯವಹಾರ ಸರಿಹೊಂದದ ಕಾರಣ ಮಳಿಗೆ ಬಿಟ್ಟಿದ್ದರು. ಆದರೆ, ಬಾಡಿಗೆಗೆ ಪಡೆಯುವ ಮುನ್ನ ನೀಡಿದ್ದ 2 ಲಕ್ಷ ರೂ ಮುಂಗಡ ಹಣವನ್ನು ಸತೀಶ ಕೋಳಂಬಕರ್ ಮರಳಿಸಿರಲಿಲ್ಲ. ಇದೇ ವಿಷಯವಾಗಿ ಅವರಿಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು ಎಂಬ ಮಾಹಿತಿಯಿದೆ.
ಕಳೆದ ಐದಾರು ತಿಂಗಳಿನಿoದ ಮುಂಗಡ ಹಣ ಹಿಂತಿರುಗಿಸುವAತೆ ಬೆನ್ನು ಬಿದ್ದಿದ್ದ ನಿತೀಶ್ ತಾಂಡೇಲ್ ಹಣ ಮರಳಿ ಬಾರದ ಸಿಟ್ಟಿನಲ್ಲಿ ಕೊಲೆ ಮಾಡಿದ್ದಾರೆ. ಆರೋಪಿಯ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ.