
0:00:00
2025-04-23
ಮುಂಡಗೋಡ: ಹೀರೆಕೆರೆಯಲ್ಲಿ ಮೀನುಗಳ ಸಮೂಹ ಸಾವು – ಕಾರಣ ಅನಿಶ್ಚಿತ
News Details
ಮುಂಡಗೋಡಿನ ಚಿಗಳ್ಳಿಯ ಹೀರೆಕೆರೆಯಲ್ಲಿನ ಮೀನುಗಳು ಏಕಾಏಕಿ ಸಾವನಪ್ಪುತ್ತಿವೆ. ಮೀನುಗಳ ಸಾವಿಗೆ ಕಾರಣ ಗೊತ್ತಾಗುತ್ತಿಲ್ಲ.
ಇಲ್ಲಿನ ಸರ್ವೇ ನಂ 49ರಲ್ಲಿ ಕೆರೆ ಇದೆ. ಮೌಲಾಲಿ ಮುಕಂದರ್ ಎಂಬಾತರು ಮೀನು ಸಾಕಾಣಿಕೆಗಾಗಿ ಈ ಕೆರೆಯನ್ನು ಟೆಂಡರ್ ಪಡೆದಿದ್ದಾರೆ. ಕೆರೆಯಲ್ಲಿ ವಿವಿಧ ಬಗೆಯ ಮೀನುಗಳನ್ನು ಅವರು ಬಿಟ್ಟಿದ್ದು, ಅವೆಲ್ಲವೂ ಇದೀಗ ಸಾವನಪ್ಪುತ್ತಿದೆ. ಮೀನುಗಳ ಅನುಮಾನಾಸ್ಪದ ಸಾವಿನಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಮೊನ್ನೆ ಒಂದೆರಡು ಮೀನುಗಳು ಮಾತ್ರ ಸಾವನಪ್ಪಿದ್ದವು. ಮಂಗಳವಾರ ನೂರಾರು ಮೀನುಗಳು ಸಾವನಪ್ಪಿರುವುದು ಗಮನಕ್ಕೆ ಬಂದಿದೆ. ಈ ಮೀನುಗಳ ಸಾವಿಗೆ ಕಾರಣ ಗೊತ್ತಾಗಿಲ್ಲ. ಮೀನುಗಳ ಸಾವಿನಿಂದ ಟೆಂಡರ್ ಪಡೆದವರು ನಷ್ಟ ಅನುಭವಿಸಿದ್ದಾರೆ.