
ಚಿಕ್ಕಮಾವಳ್ಳಿಯಲ್ಲಿ ಲಾರಿ ಬೈಕ್‌ಗೆ ಗುದ್ದಿ ಪರಾರಿ: ಮಹೇಶ್ ಹೆಗಡೆಗೆ ಗಾಯ
News Details
ಹುಬ್ಬಳ್ಳಿಯಿಂದ ಯಲ್ಲಾಪುರ ಕಡೆ ಸಂಚರಿಸುತ್ತಿದ್ದ ಲಾರಿ ಚಿಕ್ಕಮಾವಳ್ಳಿಯ ನಾರಾಯಣ ಹೆಗಡೆ ಅವರ ಬೈಕಿಗೆ ಗುದ್ದಿ ಪರಾರಿಯಾಗಿದೆ. ಪರಿಣಾಮ ನಾರಾಯಣ ಹೆಗಡೆ ಅವರ ಮಗ ಮಹೇಶ ಹೆಗಡೆ ಅವರಿಗೆ ಗಾಯವಾಗಿದೆ.
ಏಪ್ರಿಲ್ 13ರಂದು ನಾರಾಯಣ ಹೆಗಡೆ ಅವರು ತಮ್ಮ ಮಗ ಮಹೇಶ ಹೆಗಡೆ ಅವರ ಜೊತೆ ಬೈಕಿನಲ್ಲಿ ಯಲ್ಲಾಪುರಕ್ಕೆ ಬರುತ್ತಿದ್ದರು. ಹಿಂದಿನಿAದ ಜೋರಾಗಿ ಬಂದ ಲಾರಿ ಜಮಗುಳಿ ಕ್ರಾಸಿನ ಬಳಿ ಬೈಕಿನ ಹ್ಯಾಂಡಲ್‌ಗೆ ಗುದ್ದಿತು. ಪರಿಣಾಮ ಬೈಕಿನಲ್ಲಿದ್ದ ನಾರಾಯಣ ಹೆಗಡೆ ಹಾಗೂ ಮಹೇಶ ಹೆಗಡೆ ನೆಲಕ್ಕೆ ಬಿದ್ದರು. ಆಗ ಮಹೇಶ ಹೆಗಡೆ ಅವರು ಕೈ'ಗೆ ಪೆಟ್ಟಾಯಿತು.
ಅಪಘಾತದ ಬಗ್ಗೆ ಅರಿವಾದರೂ ಲಾರಿ ಚಾಲಕ ತನ್ನ ವಾಹನ ನಿಲ್ಲಿಸಲಿಲ್ಲ. ಬೈಕಿನಲ್ಲಿದ್ದವರು ಪೆಟ್ಟು ಮಾಡಿಕೊಂಡರು ಅವರನ್ನು ಉಪಚರಿಸಲಿಲ್ಲ. ಅಪಘಾತ ನಡೆದ ಬಗ್ಗೆ ಪೊಲೀಸರಿಗೆ ಸಹ ಮಾಹಿತಿ ನೀಡಲಿಲ್ಲ. ಲಾರಿ ಚಾಲಕ ತಪ್ಪು ಮಾಡಿ ಪರಾರಿಯಾಗಿದ್ದರಿಂದ ನಾರಾಯಣ ಹೆಗಡೆ ಅವರು ಸಿಟ್ಟಾದರು. ಲಾರಿಯ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಂಡರು. ಮಗನಿಗೆ ಚಿಕಿತ್ಸೆ ಕೊಡಿಸಿದ ನಂತರ ಊರಿಗೆ ಬಂದು ಅಪಘಾತದ ಬಗ್ಗೆ ಚರ್ಚಿಸಿದರು.
ಊರಿನವರು ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಅವರು ಪೊಲೀಸ್ ಠಾಣೆಗೆ ಹೋದರು. ಅಪಘಾತನಡೆಸಿ ಪರಾರಿಯಾದ ಲಾರಿ ಚಾಲಕನಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಾರಿಯಾದ ಲಾರಿ ಚಾಲಕನ ಹುಡುಕಾಟ ನಡೆಸಿದ್ದಾರೆ.