
ದಯಾ ಕಾರಂತರ ನಿಧನಕ್ಕೆ 3 ವಾರ: ಶೋಕದಲ್ಲಿ ಮುಂದುವರೆಯುತ್ತಿರುವ ಬೆಂಬಲಿಗರು
News Details
ಕ್ರೀಡೆ, ಧರ್ಮ ರಕ್ಷಣೆ ಹಾಗೂ ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಯಲ್ಲಾಪುರದ ದಯಾ ಕಾರಂತ ಅವರು ನಿಧನರಾಗಿ ಮೂರು ವಾರ ಕಳೆದಿದೆ. ಅದಾಗಿಯೂ ಅವರ ಬೆಂಬಲಿಗರಿಗೆ ಸಾವಿನ ನೋವು ದೂರವಾಗಿಲ್ಲ.
ದಯಾ ಕಾರಂತ ಅವರು ಹೆಸರನ್ನು ಶಾಶ್ವತವಾಗಿರಿಸುವುದಕ್ಕಾಗಿ ಯಲ್ಲಾಪುರದ ರಸ್ತೆಯೊಂದಕ್ಕೆ ಅವರ ಹೆಸರಿಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ಬಗ್ಗೆ ಬುಧವಾರ ಪಟ್ಟಣ ಪಂಚಾಯತಗೆ ಅರ್ಜಿಯೂ ಸಲ್ಲಿಕೆಯಾಗಿದೆ. `ಯಲ್ಲಾಪುರದ ಪೊಲೀಸ್ ಸರ್ಕಲ್ ರಸ್ತೆಯನ್ನು ದಯಾ ಕಾರಂತ ರಸ್ತೆ ಎಂದು ನಾಮಕರಣ ಮಾಡಬೇಕು' ಎಂದು ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಮನವಿ ಸಲ್ಲಿಸಿದ್ದಾರೆ. ಪಟ್ಟಣ ಪಂಚಾಯತ ಅಧ್ಯಕ್ಷೆ ನರ್ಮದಾ ನಾಯ್ಕ ಅವರು ಮನವಿ ಸ್ವೀಕರಿಸಿ ಅದಕ್ಕೆ ಸ್ಪಂದಿಸಿದ್ದಾರೆ.
`ದಯಾ ಕಾರಂತ ಅವರು ಜೀವಿತ ಅವಧಿಯಲ್ಲಿ ಸಾಕಷ್ಟು ಜನರಿಗೆ ನೆರವಾಗಿದ್ದಾರೆ. ಹಿಂದುತ್ವದ ಹೋರಾಟದಲ್ಲಿ ಅವರು ತೊಡಗಿದ್ದು, ಧರ್ಮ ರಕ್ಷಣೆಗಾಗಿ ದುಡಿದಿದ್ದಾರೆ. ಸ್ವತಃ ಕ್ರೀಡಾಪಟುಗಳಾಗಿದ್ದ ದಯಾ ಕಾರಂತ ಅವರು ಸಾಕಷ್ಟು ಕ್ರೀಡಾಪಟುಗಳಿಗೆ ನೆರವಾಗಿದ್ದರು. ಅವರ ಈ ಎಲ್ಲಾ ಸೇವೆಯನ್ನು ಸ್ಮರಿಸಿ ಪೊಲೀಸ್ ಸರ್ಕಲ್ ರಸ್ತೆಗೆ ಅವರ ಹೆಸರಿಡಬೇಕು' ಎಂದು ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಒತ್ತಾಯಿಸಿದರು. ಇನ್ನಿತರ ಕೆಲ ಸದಸ್ಯರು ಇದಕ್ಕೆ ಬೆಂಬಲವ್ಯಕ್ತಪಡಿಸಿದರು.