
ರೌಡಿಗಳ ಮನೆ ಮೇಲೆ ಬುಧವಾರ ಬೆಳಿಗ್ಗೆ ದಾಳಿ: ಪೊಲೀಸ್ ಪರಿಶೀಲನೆ
News Details
ಬುಧವಾರ ಬೆಳಗ್ಗೆ ಜಿಲ್ಲೆಯಲ್ಲಿರುವ ರೌಡಿಗಳ ಮನೆ ಮೇಲೆ ಪೊಲೀಸರು ದಿಡೀರ್ ದಾಳಿ ನಡೆಸಿದ್ದಾರೆ. ನಿದ್ದೆಗಣ್ಣಿನಲ್ಲಿರುವ ರೌಡಿ ಶೀಟರ್'ಗಳಿಗೆ ಎಚ್ಚರಿಕೆ ನೀಡಿ, ಅವರ ಮನೆಯಲ್ಲಿದ್ದ ಕೆಲ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪೊಲೀಸರು ರೌಡಿಗಳ ಮೇಲೆ ಕಾರ್ಯಾಚರಣೆ ನಡೆಸಿದರು. ಈ ಹಿಂದೆ ಹಲವು ಪ್ರಕರಣಗಳಲ್ಲಿ ದಾಖಲಾದ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿದರು. ಜನರ ಮನೆ ಪತ್ರ ವಶಕ್ಕೆ ಪಡೆದು ತೊಂದರೆ ನೀಡುವುದು, ಮೀಟರ್ ಬಡ್ಡಿ ವ್ಯವಹಾರ ನಡೆಸುವುದು ಸೇರಿ ವಿವಿಧ ಅಕ್ರಮ ಚಟುವಟಿಕೆ ನಡೆಸುತ್ತಿದ್ದವರ ಮನೆಯೊಳಗೆ ಪ್ರವೇಶಿಸಿ ಅಲ್ಲಿದ ದಾಖಲೆಗಳ ಪರಿಶೀಲನೆ ನಡೆಸಿದರು.
`ಅಪರಾಧ ಕೃತ್ಯದಲ್ಲಿ ಭಾಗಿಯಾದವರನ್ನು ಮುಖ್ಯ ವಾಹಿನಿಗೆ ತರುವುದರ ಜೊತೆ ಅವರ ಮೇಲೆ ನಿಗಾವಹಿಸುವುದಕ್ಕಾಗಿ ಈ ದಾಳಿ ನಡೆಸಲಾಗಿದೆ. ಡಿವೈಎಸ್‌ಪಿ ನೇತ್ರತ್ವದಲ್ಲಿ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿಯೂ ರೌಡಿಗಳ ಮನೆ ಪರಿಶೀಲನೆ ನಡೆಸಲಾಗಿದ್ದು, ಇನ್ಮುಂದೆ ಈ ರೀತಿಯ ದಾಳಿ ನಿರಂತರವಾಗಿರುತ್ತದೆ' ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಹೇಳಿದರು. `ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸುವಿಕೆ, ಮತ್ತೆ ಅಪರಾಧ ನಡೆಯದಂತೆ ತಡೆಯುವುದಕ್ಕಾಗಿ ಈ ಬಗೆಯ ದಾಳಿ ನಡೆಸಲಾಗುತ್ತದೆ' ಎಂದವರು ಮಾಹಿತಿ ನೀಡಿದರು.