Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
13:04:00 2025-03-20

ಅಂಕೋಲಾದ ಕಂಚಿನಬಾಗಿಲು ಬಳಿ ಕಾರು ಪಲ್ಟಿಯಾಗಿದೆ.

News Details

ಅಂಕೋಲಾದ ಕಂಚಿನಬಾಗಿಲು ಬಳಿ ಕಾರು ಪಲ್ಟಿಯಾಗಿದೆ. ಕಾರು ಕಂದಕಕ್ಕೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸಾವನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಕಾರವಾರದ ಸಂಬoಧಿಕರ ಮನೆಯಲ್ಲಿ ತಿಥಿಯಿದ್ದ ಕಾರಣ ಹುಬ್ಬಳ್ಳಿಯ ನಾಲ್ವರು ಆಗಮಿಸಿದ್ದರು. ತಿಥಿ ಮುಗಿಸಿ ಮರಳಿ ಹುಬ್ಬಳ್ಳಿಗೆ ತೆರಳುವ ವೇಳೆ ಕಂಚಿನಬಾಗಿಲು ಬಳಿ ಕಾರು ಅಪಘಾತವಾಯಿತು. ರಸ್ತೆಯ ತಿರುವಿನಲ್ಲಿ ಕಾರಿಗೆ ಅಡ್ಡಲಾಗಿ ಆಕಳು ಬಂದಿದ್ದು, ಆಕಳಿಗೆ ಗುದ್ದುವುದನ್ನು ತಪ್ಪಿಸಲು ಚಾಲಕ ಏಕಾಏಕಿ ಕಾರು ತಿರುಗಿಸಿದಾಗ ಅದು ಕಂದಕಕ್ಕೆ ಬಿದ್ದಿತು. ಅಪಘಾತ ನೋಡಿದ ಸ್ಥಳೀಯರು ತಕ್ಷಣ ಗಾಯಾಳುಗಳ ರಕ್ಷಣೆಗೆ ಬಂದರು. ಮೂವರನ್ನು ಅಂಕೋಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಗಂಭೀರ ಗಾಯಗೊಂಡಿದ್ದ ವೃದ್ಧರೊಬ್ಬರು ಅಲ್ಲಿಯೇ ಸಾವನಪ್ಪಿದರು. ಸಕಾಲದಲ್ಲಿ ಆಂಬುಲೆನ್ಸ ಸಿಗದ ಕಾರಣ ಸಾವಾದ ಬಗ್ಗೆಯೂ ಸ್ಥಳೀಯರು ದೂರಿದ್ದಾರೆ.