
ಅವಜ್ಞೆಯೆಡೆಗೆ ಮೌಲ್ಯಭರಿತ ಬಲಿ: ಗೋಕರ್ಣದಲ್ಲಿ ಇಬ್ಬರು ಯುವತಿಯರ ಸಾವು
News Details
ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಯುವತಿಯರಿಬ್ಬರು ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ಟೂರ್ ಗೈಡ್ಸ್ ಮತ್ತು ಟೂರ್ & ಟ್ರಾವೆಲ್ಸ್ ಮಾಲಕರ ನಿರ್ಲಕ್ಷದಿಂದ ಈ ಸಾವು ಸಂಭವಿಸಿದೆ.
ತಮಿಳುನಾಡಿನ ತಿರುಚಿಯ ಎಸ್ ಆರ್ ಎಂ ಮೆಡಿಕಲ್ ಕಾಲೇಜಿನ 23 ವಿದ್ಯಾರ್ಥಿಗಳು ಗುರುವಾರ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದರು. ದಾಂಡೇಲಿ, ವಿಭೂತಿ ಜಲಪಾತ ವೀಕ್ಷಣೆ ನಂತರ ಅವರು ಗೋಕರ್ಣ ಪ್ರವೇಶಿಸಿದ್ದರು. ಎಂಬಿಬಿಎಸ್ ಮುಗಿಸಿದ ಖುಷಿಯಲ್ಲಿ ಅವರೆಲ್ಲರೂ ಚಾರಣಕ್ಕೆ ಸಜ್ಜಾಗಿದ್ದರು. ಸಮುದ್ರ ಅಂಚಿನ ಕಣಿವೆ ಪ್ರದೇಶದಲ್ಲಿ ಅವರು ಚಾರಣ ನಡೆಸಿದ್ದರು. ಸಂಜೆ ವೇಳೆ ಜಟಾಯು ತೀರ್ಥದ ಬಳಿ ತೆರಳುತ್ತಿದ್ದವರು ಅಲ್ಲಿನ ಕಲ್ಪಂಬೆ ಮೇಲೆ ಕೂತು ಆಯಾಸ ನೀಗಿಸಿಕೊಳ್ಳುತ್ತಿದ್ದರು.
ಆಗ ಅಪ್ಪಳಿಸಿದ ಅಲೆ ನಾಲ್ವರನ್ನು ಸಮುದ್ರಕ್ಕೆ ಎಸೆಯಿತು. ಆ ಪೈಕಿ ಕನ್ನಿಮೂಳಿ ಈಶ್ವರನ್ ಹಾಗೂ ಹಿಂದುಜಾ ನಟರಾಜನ್ ಎಂಬಾತರು ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನಪ್ಪಿದರು. ಉಳಿದ ಇಬ್ಬರು ಸಾಕಷ್ಟು ಗುದ್ದಾಟ ನಡೆಸಿ ಜೀವ ಉಳಿಸಿಕೊಂಡರು. ಆಳವಾದ ಸಮುದ್ರ ಹಾಗೂ ಕಲ್ಬಂಡೆಗಳ ಪರ್ವತದ ನಡುವೆ ಸಿಲುಕಿದ್ದ ಶವವನ್ನು ಹೊರ ತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸ ನಡೆಸಿದರು. ಕುಡ್ಲೆ ತೀರಕ್ಕೆ ಶವ ಬಂದ ನಂತರ ಅದನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಟೂರಿಸ್ಟ್ ಗೈಡ್ ಗಾಂಧಿ ಸಿವಕುಮಾರನ್ ವಿರುದ್ಧ ವಿದ್ಯಾರ್ಥಿನಿ ಅತೀಥಾ ಟಿ ಎಸ್ ದೂರು ನೀಡಿದ್ದಾರೆ.