
ಭಟ್ಕಳದಲ್ಲಿ 15 ಪಾಕಿಸ್ತಾನ ಮಹಿಳೆಯರು ವಿವಾಹಿತರು
News Details
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 15 ಜನ ಪಾಕಿಸ್ತಾನದ ಪ್ರಜೆಗಳಿದ್ದಾರೆ. ಅವರೆಲ್ಲರೂ ಮಹಿಳೆಯರಾಗಿದ್ದು, ಭಟ್ಕಳದ ಪುರುಷರನ್ನು ವರಿಸಿದ್ದಾರೆ. ಕಾಶ್ಮೀರದ ಪಹಲಾಗಮ್'ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರಿಂದ ಕೇಂದ್ರ ಸರ್ಕಾರ ಪಾಕಿಸ್ತಾನಿ ಪ್ರಜೆಗಳು ಭಾರತ ಬಿಟ್ಟು ತೊಲಗಲು ಸೂಚಿಸಿದೆ. ಹೀಗಾಗಿ ಭಟ್ಕಳದಲ್ಲಿರುವ 15 ಮಹಿಳೆಯರು ಆತಂಕದಲ್ಲಿದ್ದಾರೆ. ಭಟ್ಕಳದಲ್ಲಿರುವ 15 ಪಾಕಿಸ್ತಾನಿ ಪ್ರಜೆಗಳು ತಾತ್ಕಾಲಿಕ ವಿಸಾ ಅಡಿ ಇಲ್ಲಿ ನೆಲೆಸಿದ್ದಾರೆ. ಭಟ್ಕಳದ ಅನೇಕರು ಪಾಕಿಸ್ತಾನದವರ ಜೊತೆ ವಿವಾಹ ಸಂಬAಧವನ್ನು ಹೊಂದಿದ್ದು, ಪಾಕಿಸ್ತಾನದ ನೆಂಟರು ಭಟ್ಕಳಕ್ಕೆ ಆಗಾಗ ಬಂದು ಹೋಗುವುದು ಸಾಮಾನ್ಯ. ಭಟ್ಕಳದ ನವಾಯಿತಿ ಮುಸ್ಲಿಮರು ಅರಬ್ ರಾಷ್ಟçದಲ್ಲಿ ಸಹ ಬಂಧು-ಮಿತ್ರರನ್ನು ಹೊಂದಿದ್ದಾರೆ. ಭಟ್ಕಳಿಗರನ್ನು ವರಿಸಿದ ಪಾಕಿಸ್ತಾನದ ಮಹಿಳೆಯರು ಭಾರತದ ವಿಸಾಗಾಗಿ ಅರ್ಜಿ ಸಲ್ಲಿಸಿದರೂ ಅದನ್ನು ಕೇಂದ್ರ ಸರ್ಕಾರ ಪುರಸ್ಕರಿಸಿಲ್ಲ. ಇನ್ನೂ ಭಟ್ಕಳದಲ್ಲಿರುವ ಪಾಕಿಸ್ತಾನಿ ಪ್ರಜೆಗಳ ಮೇಲೆ ಪೊಲೀಸರು ನಿಗಾವಿರಿಸಿದ್ದಾರೆ. ಅವರು ಭಟ್ಕಳ ಬಿಟ್ಟು ತೆರಳುವುದಕ್ಕೂ ಅನುಮತಿ ಕಡ್ಡಾಯವಾಗಿದೆ. ಆರೋಗ್ಯ ತಪಾಸಣೆಗೆ ಅವರು ಮಂಗಳೂರಿಗೆ ಹೋಗುವುದಿದ್ದರೂ ಅನುಮತಿಪಡೆಯಲು ಸೂಚಿಸಲಾಗಿದೆ. ಕೇಂದ್ರ ಸರ್ಕಾರ ಗಡಿಪಾರಿಗೆ ಆದೇಶಿಸಿದ್ದರೂ, ಎಲ್ಟಿವಿ ವಿಸಾಪಡೆದಿರುವ ಭಟ್ಕಳದಲ್ಲಿರುವ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಸ್ಪಷ್ಠತೆ ಇಲ್ಲ. ಕೇಂದ್ರ ಸರ್ಕಾರದಿಂದ ಸೂಕ್ತ ನಿರ್ದೇಶನಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ. ಸರ್ಕಾರದ ನಿರ್ದೇಶನ ಬಂದ ನಂತರ ಆ ಬಗ್ಗೆ ಕ್ರಮಜರುಗಿಸುವುದಾಗಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.