
0:00:00
2025-04-26
ಮುಂಡಗೋಡದಲ್ಲಿ ಜಾನುವಾರು ಹತ್ಯೆ: ಜಾಹೀರ ಬೇಪಾರಿ ಬಂಧನ
News Details
ಜಾನುವಾರು ಹತ್ಯೆ ಮಾಡುವುದನ್ನು ಕಾಯಕವನ್ನಾಗಿಸಿಕೊಂಡಿದ್ದ ಮುಂಡಗೋಡದ ಜಾಹೀರ ಬೇಪಾರಿ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ.
ಯಲ್ಲಾಪುರ ರಸ್ತೆಯಲ್ಲಿರುವ ರಜಾಕೀಯ ಮಸೀದಿ ಹಿಂದೆ ಜಾನುವಾರುಗಳನ್ನು ಕೊಂದು ಅದರ ಮಾಂಸವನ್ನು ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಪಿಐ ರಂಗನಾಥ ನೀಲಮ್ಮನವರ್ ಅವರು ದೇಶಪಾಂಡೆ ನಗರದ ಜಾಹೀರ ಬೇಪಾರಿಯನ್ನು ವಶಕ್ಕೆ ಪಡೆದರು. ಈ ವೇಳೆ ಅಲ್ಲಿದ್ದ ಇನ್ನೊಬ್ಬ ಓಡಿ ಪರಾರಿಯಾಗಿದ್ದು, ಆತನ ಹುಡುಕಾಟ ಮುಂದುವರೆದಿದೆ.
ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದರು. ಈ ವೇಳೆ ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.