
0:00:00
2025-04-26
ಕೈಗಾ ಅಣು ವಿದ್ಯುತ್ ಘಟಕದಲ್ಲಿ ಅಡುಗೆ ಕೆಲಸ ಮಾಡುವ ವಿಜಯೇಶ್ ಅವದ್ ನಿಧನ
News Details
ಕಾರವಾರದ ಕೈಗಾ ಅಣು ವಿದ್ಯುತ್ ಘಟಕದ 5 ಮತ್ತು 6ನೇ ಕ್ಯಾಂಟಿನ್'ನಲ್ಲಿ ಅಡುಗೆ ಕೆಲಸ ಮಾಡುವ ವಿಜ್ರೇಶ್ ಅವದ್ ಏಕಾಏಕಿ ಕುಸಿದು ಬಿದ್ದು ಸಾವನಪ್ಪಿದ್ದಾರೆ.
ಉತ್ತರ ಪ್ರದೇಶದ ವಿಜ್ರೇಶ್ ಅವದ್ ಅವರು 15 ಕಾರ್ಮಿಕರ ಜೊತೆ ಶುಕ್ರವಾರ ಕೆಲಸ ಮಾಡುತ್ತಿದ್ದರು. ಬೆಳಗ್ಗೆ 7 ಗಂಟೆ ಅವಧಿಗೆ ಅಡುಗೆ ಕೋಣೆಯಿಂದ ಸ್ಟೋರ್ ರೂಮಿಗೆ ತೆರಳಿದ ಅವರು ಅಲ್ಲಿಯೇ ಕುಸಿದು ಬಿದ್ದರು. ಉಳಿದ ಕಾರ್ಮಿಕರು ಅವರನ್ನು ಎಬ್ಬಿಸುವ ಪ್ರಯತ್ನ ಮಾಡಿದರು. ಆದರೆ, ವಿಜ್ರೇಶ್ ಅವದ್ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.
ಎಲ್ಲರೂ ಸೇರಿ ವಿಜ್ರೇಶ್ ಅವರನ್ನು ಕೈಗಾ ಟೌನ್‌ಶಿಪ್ ಆಸ್ಪತ್ರೆಗೆ ಕರೆತಂದರು. ಅಲ್ಲಿನ ವೈದ್ಯರು ವಿಜ್ರೇಶ್ ಅವರು ಈಗಾಗಲೇ ಸಾವನಪ್ಪಿದ ಬಗ್ಗೆ ಘೋಷಿಸಿದರು. ಈ ಬಗ್ಗೆ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಕೈಗಾದ ಕಾರ್ಮಿಕ ರಾಕೇಶ್ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.