Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-26

ಕರ್ನಾಟಕದಲ್ಲಿ 88 ಪಾಕಿಸ್ತಾನಿ ಪ್ರಜೆಗಳು, ಹೆಚ್ಚಿನವರು ಉತ್ತರ ಕನ್ನಡದಲ್ಲಿ; ದೀರ್ಘಕಾಲಿಕ ವೀಸಾದಿಂದ ಗಡಿಪಾರು ನಿರಾಕರಣೆ.

News Details

ಕರ್ನಾಟಕದಲ್ಲಿ ಒಟ್ಟು 88 ಪಾಕಿಸ್ತಾನಿ ಪ್ರಜೆಗಳಿದ್ದು, ಅದರಲ್ಲಿ ಹೆಚ್ಚಿನವರು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದಾರೆ. ಆ ಪೈಕಿ ಭಟ್ಕಳದಲ್ಲಿ 14 ಜನ ಹಾಗೂ ಕಾರವಾರದಲ್ಲಿ ಒಬ್ಬರು ನೆಲೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವವರೆಲ್ಲರೂ ದೀರ್ಘಕಾಲಿಕ ಅವಧಿಯ ವೀಸಾ ಪಡೆದಿರುವ ಕಾರಣ ಮತ್ತೆ ಪಾಕಿಸ್ತಾನಕ್ಕೆ ಗಡಿಪಾರು ಮಾಡದಿರಲು ಸರ್ಕಾರ ನಿರ್ಧರಿಸಿದೆ.

ಶುಕ್ರವಾರ ಸಂಜೆ ಈ ಬಗ್ಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಮಾಹಿತಿ ಹಂಚಿಕೊAಡಿದ್ದಾರೆ. `ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ಬಳಿಕ ಸರ್ಕಾರ ಪಾಕಿಸ್ತಾನಿ ಪ್ರಜೆಗಳನ್ನು ಏ 27ರೊಳಗೆ ದೇಶದಿಂದ ಹೊರಕ್ಕೆ ಕಳುಹಿಸಲು ಸರ್ಕಾರ ಸೂಚನೆ ನೀಡಿದೆ. ಮೆಡಿಕಲ್ ವಿಸಾ ಹೊಂದಿರುವವರಿಗೆ ಏ 29ರೊಳಗೆ ಗಡಿಪಾರು ಮಾಡುವಂತೆ ಸೂಚಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗಡಿಪಾರು ಆಗಬೇಕಾದ ಯಾವುದೇ ವ್ಯಕ್ತಿಗಳಿಲ್ಲ' ಎಂದವರು ಸ್ಪಷ್ಠಪಡಿಸಿದರು.

`ಪಾಕಿಸ್ತಾನ ಮೂಲದ 10 ಮಹಿಳೆಯರು, ಮೂವರು ಮಕ್ಕಳು ಇಲ್ಲಿದ್ದಾರೆ. ಒಬ್ಬರು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವ ಕಾರಣ ಜಾಮೀನು ಪಡೆದು ಇಲ್ಲಿ ನೆಲೆಸಿದ್ದಾರೆ. ಎಲ್ಲರೂ ಮಹಿಳೆಯರಾಗಿದ್ದು, 10 ಮಹಿಳೆಯರು ವಿವಾಹವಾಗಿ ಬಂದವರಾಗಿದ್ದಾರೆ. ಅವರನ್ನು ಹೊರತುಪಡಿಸಿ ಕ್ರಮಕ್ಕೆ ಸರ್ಕಾರ ಆದೇಶಿಸಿದ್ದರಿಂದ ಸದ್ಯ ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿಗಳ ಗಡಿಪಾರು ಮಾಡಿಲ್ಲ. ಅಕ್ರಮವಾಗಿ ಜಿಲ್ಲೆಗೆ ಪ್ರವೇಶಿಸಿದವರ ಬಗ್ಗೆಯೂ ಹುಡುಕಾಟ ನಡೆದಿದ್ದು, ಆ ಬಗ್ಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ' ಎಂದು ಅವರು ವಿವರಿಸಿದರು.

`ಭಟ್ಕಳದಲ್ಲಿರುವ ಪಾಕಿಸ್ತಾನದ ಮಹಿಳೆಯರು ಭಾರತೀಯರನ್ನು ಮದುವೆಯಾಗಿದ್ದಾರೆ. ಒಬ್ಬರು ಪಾಕಿಸ್ತಾನದಿಂದ ಮಹಿಳೆ ಭಾರತೀಯ ಪ್ರಜೆಯಾಗಲು ಅರ್ಜಿ ಸಲ್ಲಿಸಿದ್ದಾರೆ. ವಲ್ಕಿಯ ಮಹಿಳೆಯೊಬ್ಬರು ಪಾಕಿಸ್ತಾನದವರನ್ನು ವಿವಾಹವಾಗಿದ್ದಾರೆ. ಅವರು ಸದ್ಯ ವಲ್ಕಿಯಲ್ಲಿದ್ದು, ಸರ್ಕಾರದ ನಿರ್ದೇಶನಕ್ಕೆ ಕಾಯುತ್ತಿದ್ದೇವೆ' ಎಂದು ತಿಳಿಸಿದರು.