
ನಕಲಿ ಖಾತೆ ಹಂಚಿಕೆ: ದಾಂಡಿಗನಿಗೆ ಬಂಧನ, ಜೈಲು ಶಿಕ್ಷೆ
News Details
ನಕಲಿ ಫೇಸ್ಬುಕ್ ಖಾತೆ ರಚಿಸಿ ಅಲ್ಲಿ ಅಸಂಬದ್ಧ ಫೋಟೋ-ಮಾಹಿತಿ ಹಂಚಿಕೊಳ್ಳುತ್ತಿದ್ದ ದಾಂಡೇಲಿಯ ದಾಂಡಿಗನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಪೊಲೀಸರು ಅಲ್ಲಿಯೂ ಕಾನೂನು ಪಾಠ ಮಾಡಿದ್ದಾರೆ.
ದಾಂಡೇಲಿಯ ಆಜಾದ್ ನಗರದಮಹಮ್ಮದ ಅನೀಸ್ ಅಬ್ದುಲ್ ಕರೀಂ ಹುಲುಗೂರು(46) ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದರು. ಜೊತೆಗೆ ಫೇಸ್ಬುಕ್'ನಲ್ಲಿ ನಕಲಿ ಖಾತೆ ತೆರೆದು ಜನರನ್ನು ಕಾಡಿಸುತ್ತಿದ್ದರು. ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ನಂತರ ಸಮಾಜದ ದಾರಿ ತಪ್ಪಿಸಲು ಅವರು ಪ್ರಯತ್ನಿಸಿದ್ದರು. ಕಾದೀರ್ ಖಾನ್ ಎಂಬ ಹೆಸರಿನಲ್ಲಿ ಫೇಸ್ಬುಕ್ ಖಾತೆ ರಚಿಸಿ ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇನ್ನಿತರ ನಾಯಕರನ್ನು ನಾಯಿಗೆ ಹೋಲಿಸಿ ಫೋಟೋ ಹಂಚಿಕೊAಡಿದ್ದರು.
ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೊಗಿ ಆದಿತ್ಯನಾಥ, ಆಸ್ಸಾಂ ಮುಖ್ಯಮಂತ್ರಿ ಹೇಮಂತ ಬಿಸ್ವಾ ಶರ್ಮಾ ಸೇರಿ ಅನೇಕರನ್ನು ಅವರು ನಾಯಿಗೆ ಹೋಲಿಸಿದ್ದರು. ದಾಂಡೇಲಿ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಮಹಬೂಬಸಾಬ್ ಕಿಲ್ಲೆದಾರ್ ಇದನ್ನು ಗಮನಿಸಿದರು. ಈ ಬಗ್ಗೆ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡರು. ನಕಲಿ ಫೇಸ್ಪುಕ್ ಖಾತೆಯ ಹಿಂದಿದ್ದ ಅಸಲಿ ವ್ಯಕ್ತಿಯನ್ನು ಕಂಡು ಹಿಡಿದ ದಾಂಡೇಲಿ ಪೊಲೀಸರು ಅನೀಸ್ ಅಬ್ದುಲ್ ಕರೀಂ ಹುಲುಗೂರು'ವಿಗೆ ಬೆಂಡೆತ್ತಿದರು.
ಸದ್ಯ ನ್ಯಾಯಾಲಯವೂ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪಿಎಸ್‌ಐ ಅಮೀನ್ ಅತ್ತಾರ್ ಅವರು ವಿಚಾರಣೆ ಮುಂದುವರೆಸಿದ್ದಾರೆ.