Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-28

ಕಸದಿಂದ ಕಾಕರತಳೆ ಕೆರೆ ಅಪಾಯದಲ್ಲಿ: ಸ್ಥಳೀಯರ ಪ್ರತಿಭಟನೆ

News Details

ಕಾರವಾರದ ಕಾಕರತಳೆ ಕೆರೆ ಅಂಚಿನಲ್ಲಿ ತ್ಯಾಜ್ಯ ವಿಲೆವಾರಿ ನಡೆದಿದ್ದು, ಇದರಿಂದ ಕೆರೆ ಅಪಾಯಕ್ಕೆ ಸಿಲುಕಿದೆ. `ಕಸ ತೆಗೆಸಿ.. ಕೆರೆ ರಕ್ಷಿಸಿ' ಎಂಬ ಬೇಡಿಕೆ ಮುಂದಿಟ್ಟು ಆ ಭಾಗದ ಜನ ಪ್ರತಿಭಟನೆ ನಡೆಸಿದ್ದಾರೆ.

ಚಿತ್ತಾಕುಲ ಗ್ರಾಮ ಪಂಚಾಯಿತಿಯ ಘನ ತ್ಯಾಜ್ಯ ವಿಲೇವಾರಿ ಘಟಕದ ಸಮೀಪ ಊರಿನವರು ಧರಣಿ ನಡೆಸಿದರು. `ನಾಲ್ಕು ವರ್ಷಗಳಿಂದ ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಿಸುವAತೆ ಒತ್ತಾಯಿಸಿದರೂ ಕ್ರಮವಾಗಿಲ್ಲ. ಗ್ರಾಮ ಪಂಚಾಯತದವರು ಸ್ಪಂದಿಸುತ್ತಿಲ್ಲ' ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು.

`ಕಾಕರತಳೆ ಕೆರೆ ಈ ಭಾಗದಲ್ಲಿ ಅಂತರ್ಜಲ ವೃದ್ಧಿಗೆ ಪೂರಕವಾಗಿದೆ. ಆದರೆ, ಈಗ ಇದೇ ಕೆರೆಯನ್ನು ಕಲುಷಿತಗೊಳಿಸಲಾಗುತ್ತಿದೆ' ಎಂದು ಅಲ್ಲಿನ ಗಜೇಂದ್ರ ನಾಯ್ಕ ಅಸಮಧಾನವ್ಯಕ್ತಪಡಿಸಿದರು. `ಗ್ರಾಮ ಪಂಚಾಯಿತಿಯ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾದ ಬಳಿಕ ಸಮಸ್ಯೆ ಹೆಚ್ಚಾಗಿದೆ. ಜನರು ಇಲ್ಲಿ ಜನರು ಕಸಗಳನ್ನು ಕೆರೆಗೆ ಎಸೆಯುತ್ತಿದ್ದಾರೆ' ಎಂದು ಅಶೋಕ ರಾಣೆ ಕಿಡಿಕಾರಿದರು.

`ತ್ಯಾಜ್ಯ ವಿಲೇವಾರಿ ಘಟಕದ ಪಕ್ಕದಲ್ಲಿ ಮೀನು ಮಾರುಕಟ್ಟೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ಸರ್ಕಾರಿ ಶಾಲೆಯ ಜೊತೆ ಅನೇಕ ಮನೆಗಳಿವೆ. ತ್ಯಾಜ್ಯ ಘಟಕದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ' ಎಂದು ದೀಪಕ ದೇಸಾಯಿ, ದೀಪಿಕಾ ಮಡಕೈಕರ ಸಮಸ್ಯೆ ವಿವರಿಸಿದರು. ಪ್ರಮುಖರಾದ ದಿಲೀಪ ಗಜಿನಕರ, ಗಾಯತ್ರಿ ಕದಂ, ದೇವರಾಯ ಸೈಲ್, ಸೀಮಾ ಕದಂ, ವಂದನಾ ಮಾಳೇಕರ್, ಸುನೀಲ ಐಗಳ ಪ್ರತಿಭಟನೆಯಲ್ಲಿ ಕಾಣಿಸಿಕೊಂಡರು.