
ಶಿರಸಿಯ ಹುಲೆಕಲ್ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರ ಕಡಿದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದಾರೆ.
News Details
ಶಿರಸಿಯ ಹುಲೆಕಲ್ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರ ಕಡಿದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಅರಣ್ಯಾಧಿಕಾರಿಗಳು ಆ ಮೂವರನ್ನು ಬಂಧಿಸಿ ಪರಿಸರದ ಪಾಠ ಮಾಡಿದ್ದಾರೆ. ಸಿಂಗನಹಳ್ಳಿ ಗ್ರಾಮದ ಅರಣ್ಯದಲ್ಲಿ ಶ್ರೀಗಂಧದ ಮರಗಳಿರುವುದನ್ನು ಅದೇ ಊರಿನ ಸುಬ್ರಾಯ ನಾಯ್ಕ ನೋಡಿದ್ದರು. ಆ ಮರ ಕಡಿದು ಮಾರಾಟ ಮಾಡಿದರೆ ಬೇಗ ಶ್ರೀಮಂತರಾಗಬಹುದು ಎಂದು ಅವರು ಅಂದಾಜಿಸಿದ್ದರು. ಈ ಬಗ್ಗೆ ಸ್ನೇಹಿತ ರಾಮ ನಾಯ್ಕ ಹಾಗೂ ಬನವಾಸಿ ರಸ್ತೆಯ ಗಡಳ್ಳಿ ಕ್ರಾಸ್ ಬಿಳಿಗಿರಿ ಕೊಪ್ಪದ ಅಬ್ದುಲ್ ಸಾಬ್ ಬಳಿ ಹೇಳಿಕೊಂಡಿದ್ದರು. ನoತರ ಆ ಮೂವರು ಸೇರಿ ಅಕ್ರಮವಾಗಿ ಕಾಡು ಪ್ರವೇಶಿಸಿದ್ದರು. ಅಲ್ಲಿಂದ ಶ್ರೀಗಂಧದ ಮರ ಕಡಿದಿದ್ದರು. ಆ ಮರವನ್ನು ಹಲವು ತುಂಡುಗಳನ್ನಾಗಿಸಿದ್ದರು. ನಂತರ ಅದನ್ನು ಕಾಡಿನಿಂದ ಸಾಗಿಸಿ ಸಿಕ್ಕಿ ಬಿದ್ದರು. ಹುಲೇಕಲ್ ವಲಯ ಅರಣ್ಯ ಅಧಿಕಾರಿ ಶಿವಾನಂದ್ ನಿಂಗಾಣಿ ನೇತೃತ್ವದ ಅರಣ್ಯ ಸಿಬ್ಬಂದಿ ಆ ಮೂವರನ್ನು ಬಂಧಿಸಿದರು. 41 ಸಾವಿರ ರೂ ಮೌಲ್ಯದ ಮರದ ತುಂಡುಗಳನ್ನು ವಶಕ್ಕೆ ಪಡೆದರು. ಜೊತೆಗೆ ಅವರ ಬಳಿಯಿದ್ದ ಕತ್ತಿ, ಗರಗಸ, ನೀರಿನ ಬಾಟಲಿಗಳನ್ನು ಮುಖ್ಯ ಸಾಕ್ಷಿಯಾಗಿ ಅರಣ್ಯಾಧಿಕಾರಿಗಳು ಪರಿಗಣಿಸಿದರು.