
ತಲೆಮರೆಸಿಕೊಂಡಿದ್ಹ ಹಲವು ಅಪರಾಧ ಪ್ರಕರಣಗಳ ಆರೋಪಿ ಮೋಸಿನ್ ವಿಜಯಪುರದ ಸಿಂದಗಿಯಲ್ಲಿ ಬಂಧನ
News Details
ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಹಲವು ಪ್ರಕರಣದ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮೋಸಿನ್ ಯಾನೆ ಇಮ್ತಿಯಾಜ್ ತಂದೆ ಅಬ್ದುಲ್ ಶಕೂರ್ ಹೊನ್ನಾವರ ಬಂಧಿತ ವ್ಯಕ್ತಿ. 2019ರಲ್ಲಿ ಶಿರಸಿಯಲ್ಲಿ ಅಸ್ಲಾಂ ಎಂಬಾತನ ಕೊಲೆ ನಡೆದಿತ್ತು. ಈ ಕೊಲೆಯ ಆರೋಪಿಗಳ ಪೈಕಿ ಮೋಸಿನ್ ಸಹ ಒಬ್ಬನಾಗಿದ್ದನು. ಇದರೊಂದಿಗೆ ಬೆಂಗಳೂರಿನ ಡಿಜೆ ಹಳ್ಳಿ ಗಲಬೆಯಲ್ಲಿ ಸಹ ಮೋಸಿನ್ ಪ್ರಮುಖ ಆರೋಪಿಯಾಗಿದ್ದನು. ಭಯೋತ್ಪಾದನೆ ಪ್ರಕರಣದಲ್ಲಿ ಸಹ ಮೋಸಿನ್ ಭಾಗಿಯಾಗಿದ್ದ ಎನ್ನುವ ಆರೊಪ ಇದೆ. ಅನೇಕ ಬಾರಿ ಆತನ ಕುಟುಂಬದವರೇ ರಕ್ಷಣೆ ನೀಡಿದ್ದರು ಎನ್ನಲಾಗಿದೆ. ಈ ಹಿನ್ನಲೆ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಮೋಸಿನ್'ನನ್ನು ಬಂಧಿಸಿದ್ದು ರಕ್ಷಣೆ ನೀಡಿದ್ದರು ಎನ್ನಲಾದ ಅವರ ಕುಟುಂಬದವರ ವಿಚಾರಣೆಯನ್ನು ಮುಂದುವರೆಸಿದ್ದಾರೆ. ತಲೆಮರೆಸಿಕೊಂಡಿದ್ದ ಮೋಸಿನ್'ನನ್ನು ಪೊಲೀಸರು ವಿಜಯಪುರದ ಸಿಂದಗಿಯಲ್ಲಿ ಬಂಧಿಸಿದ್ದಾರೆ. ಸದ್ಯ ಕೊಲೆ ಪ್ರಕರಣದಲ್ಲಿ ಆತನನ್ನು ಬಂಧಿಸಿದ್ದರೂ ರಾಷ್ಟಿಯ ತನಿಖಾ ದಳದವರು ಮೋಸಿನ್'ನನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ಸರ್ಕಾರದಿಂದ ನಿಷೇಧಕ್ಕೆ ಒಳಗಾಗಿರುವ ಪಿಎಫ್‌ಐ ಸಂಘಟನೆಗೂ ಮೋಸಿನ್ ಅಧ್ಯಕ್ಷನಾಗಿದ್ದ. 2022ರಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದ ಆತ ಮತ್ತೆ ಕೋರ್ಟಿನ ಕಡೆ ತಲೆ ಹಾಕಿರಲಿಲ್ಲ. ಆತನ ವಿರುದ್ಧ ಭಯೋತ್ಪಾದನೆ ಸೇರಿ ಅನೇಕ ಆರೋಪಗಳಿದ್ದರೂ ಕುಟುಂಬದವರು ಅದನ್ನು ಸಹಿಸಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನಲೆ ಮೋಸಿನ್ ಪತ್ನಿ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆತನ ಹಿನ್ನಲೆ ಅರಿತ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಖುದ್ದು ಮೋಸಿನ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. `ಕೊಲೆ, ಹಲ್ಲೆ ಸೇರಿ ಹಲವು ಪ್ರಕರಣದಲ್ಲಿ ಮೋಸಿನ್ ಆರೋಪಿ. ಬೆಂಗಳೂರಿನ ಕೆಜೆ ಹಳ್ಳಿ-ಡಿಜೆ ಹಳ್ಳಿ ಗಲಬೆಯಲ್ಲಿ ಸಹ ಭಾಗಿಯಾಗಿದ್ದ. ಸಾಕಷ್ಟು ಬಾರಿ ಆತನ ಮನೆ ಮೇಲೆ ದಾಳಿ ನಡೆಸಿ ಹುಡುಕಿದರೂ ಸಿಕ್ಕಿರಲಿಲ್ಲ. ಇದೀಗ ಆತ ಸಿಕ್ಕಿ ಬಿದ್ದಿದ್ದು, ವಿಚಾರಣೆ ನಡೆಯುತ್ತಿದೆ' ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಮಾಹಿತಿ ನೀಡಿದ್ದಾರೆ.