Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-29

ಶಿರಸಿ ರಸ್ತೆ ಸಮಸ್ಯೆ: ಜಿಲ್ಲಾಡಳಿತ ಭರವಸೆಯೊಡನೆ ಹೋರಾಟ ಹಿಂಪಡೆ

News Details

ಶಿರಸಿ ಮತ್ತಿಘಟ್ಟ ಕೆಳಗಿನಕೇರಿ ಜನರ ಸಮಸ್ಯೆಗಳ ಬಗೆಹರಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಜಿಲ್ಲಾಕೇಂದ್ರ ಕಾರವಾರದಲ್ಲಿ ಪ್ರತಿಭಟನೆ ಶುರು ಮಾಡಿದ್ದು, ಪ್ರತಿಭಟನೆಗೂ ಮುನ್ನವೇ ಜಿಲ್ಲಾಡಳಿತ ಸಂದಾನ ಸಭೆ ನಡೆಸಿದೆ. ಸದ್ಯ 5 ಲಕ್ಷ ರೂ ವೆಚ್ಚದಲ್ಲಿ ತುರ್ತಾಗಿ ರಸ್ತೆ ಕಾಮಗಾರಿ ನಡೆಸುವ ವಾಗ್ದಾನದ ಹಿನ್ನಲೆ ಹೋರಾಟಗಾರರು ಪ್ರತಿಭಟನೆ ಹಿಂಪಡೆದಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅನಂತಮೂರ್ತಿ ಹೆಗಡೆ ಪ್ರತಿಭಟನೆ ಶುರು ಮಾಡಿದರು. ತಕ್ಷಣ ಶಿರಸಿ ಲೋಕೋಪಯೋಗಿ ಇಲಾಖೆ ಅಭಿಯಂತರ ಬಸವರಾಜ ಬಳ್ಳಾರಿ ಅವರನ್ನು ಕರೆಯಿಸಿದ ಜಿಲ್ಲಾಧಿಕಾರಿ ಊರಿನವರ ಸಮಸ್ಯೆ ಬಗ್ಗೆ ವರದಿಪಡೆದರು. ಅದಾದ ನಂತರ ಪ್ರತಿಭಟನಾಕಾರರನ್ನು ಕರೆಯಿಸಿ ಮಾತನಾಡಿಸಿದರು. `ಮಳೆಗಾಲ ಶುರುವಾಗುವ ಮುನ್ನ 5 ಲಕ್ಷ ರೂ ವೆಚ್ಚದಲ್ಲಿ ರಸ್ತೆ ರಿಪೇರಿ ಮಾಡಿಸುವುದು. ಮಳೆ ಮುಗಿದ ನಂತರ ಸಿಮೆಂಟ್ ರಸ್ತೆ ಮಾಡುವುದು' ಎನ್ನುವುದರ ಬಗ್ಗೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. `ಈ ಬಗ್ಗೆ ಲಿಖಿತವಾಗಿ ತಿಳಿಸಬೇಕು' ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದು, ಉತ್ತರ ಕನ್ನಡ ಜಿಲ್ಲಾಡಳಿತ ಅದಕ್ಕೂ ಒಪ್ಪಿಗೆ ಸೂಚಿಸಿತು.

ಈ ನಡುವೆ ಊರಿನವರ ಸಮಸ್ಯೆ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳ ಜೊತೆ ಫೋನಿನಲ್ಲಿ ಮಾತನಾಡಿದರು. `ಶಿರಸಿ ಅಂಕೋಲಾ ತಾಲೂಕಿನ ಗಡಿ ಪ್ರದೇಶವಾದ ಮತ್ತಿಘಟ್ಟ ಕೆಳಗಿನ ಕೇರಿ ಸಮೀಪದ ಹಲವು ಊರುಗಳು ಕನಿಷ್ಟ ಸೌಕರ್ಯವೂ ಇಲ್ಲದೇ ನಲುಗಿದೆ. ಇಲ್ಲಿನ ಜನ ದಟ್ಟ ಕಾಡಿನೆ ಮಧ್ಯೆ ನಿತ್ಯವೂ ಭಯದ ಬದುಕು ಸಾಗಿಸುತ್ತಿದ್ದಾರೆ' ಎಂಬ ವಿಷಯವನ್ನು ಮನವರಿಕೆ ಮಾಡಿದರು. `ಮಹಿಳೆಯರಿಗೆ ಸರ್ಕಾರ ನೀಡಿದ ಉಚಿತ ಬಸ್ ಪ್ರಯಾಣ ಐದು ಕಿಮೀ ಘಟ್ಟ ಹತ್ತಬೇಕು. ಗ್ರಾಮಗಳಿಗೆ ಇರುವ ಒಂದು ರಸ್ತೆ ಕಳೆದ ಮಳೆಗಾಲದಲ್ಲಿ ಭೂ ಕುಸಿತವಾಗಿ ಕಂದಕವಾಗಿ ನಿರ್ಮಾಣಗೊಂಡಿದ್ದರೂ ಜನಪ್ರತಿನಿಧಿಗಳು ಒಬ್ಬರೂ ಬರಲಿಲ್ಲ. ಶಿರಸಿ ಶಾಸಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ' ಎನ್ನುವ ಬಗ್ಗೆ ಅನಂತಮೂರ್ತಿ ಹೆಗಡೆ ಅಸಮಧಾನವ್ಯಕ್ತಪಡಿಸಿದರು.

`ಕಳೆದ ಮಳೆಗಾಲದ 15 ದಿನಗಳ ಕಾಲ ಊರು ದ್ವೀಪವಾಗಿತ್ತು. ಮರದಿಂದ ಬಿದ್ದವನನ್ನು ಕಂಬಳಿಯಲ್ಲಿ ಹೆಗಲಮೇಲೆ ಹೊತ್ತೊಯ್ದರೂ ಆತ ಬದುಕುಳಿಯಲಿಲ್ಲ' ಎಂಬ ಸಂಗತಿ ಪ್ರತಿಭಟನೆಯಲ್ಲಿ ಪ್ರತಿಧ್ವನಿಸಿತು. ಮಾಡನಮನೆ, ಉಂಬಳಗೇರಿ, ಗುಂಡಪ್ಪೆ, ನರಸೆಬೈಲ್ ಮೊದಲಾದ ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು.