Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-29

ಹೊನ್ನಾವರ: ಜಿಪಿಎಸ್ ನಕಾಶೆ ಪ್ರತಿಗಾಗಿ ಸಹಸ್ರಾರು ಅರಣ್ಯವಾಸಿಗಳಿಂದ ಅರ್ಜಿ

News Details

ಹೊನ್ನಾವರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ಸಮಿತಿಯಿಂದ ಜರುಗಿಸಲಾದ ಜಿಪಿಎಸ್ ನಕಾಶೆಯ ಪ್ರತಿಗಾಗಿ ಸಮಾಜ ಕಲ್ಯಾಣ ಇಲಾಖೆಗೆ ಸಹಸ್ರಾರು ಅರಣ್ಯವಾಸಿಗಳಿಂದ ಜಿಪಿಎಸ್ ಪ್ರತಿಗೆ ಅರ್ಜಿ ಸಲ್ಲಿಸಲಾಯಿತು ಎಂದು ಹೋರಾಟಗಾರರ ವೇದಿಕೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಇಂದು ಹೊನ್ನಾವರ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಗೆ ಅರಣ್ಯವಾಸಿಗಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದರು.

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಹೊನ್ನಾವರ ತಾಲೂಕಿನಾದ್ಯಂತ ೧೧,೪೯೨ ಅರ್ಜಿಗಳನ್ನು ಸಲ್ಲಿಸಿದ್ದು ಅವುಗಳಲ್ಲಿ ೯,೨೩೯ ಅರ್ಜಿಗಳು ತಿರಸ್ಕಾರವಾಗಿದೆ. ಅರ್ಜಿ ಸಲ್ಲಿಸಿದ್ದವರಲ್ಲಿ ಇಂದಿಗೂ ಸುಮರು ೨ ಸಾವಿರ ಅರಣ್ಯವಾಸಿಗಳ ಕ್ಷೇತ್ರದ ಜಿಪಿಎಸ್ ಆಗಿದ್ದು ಇರುವುದಿಲ್ಲ ಹಾಗೂ ಸುಮಾರು ೪ ಸಾವಿರ ಅಸಮರ್ಪಕ ಜಿಪಿಎಸ್‌ಗೆ ಹೋರಾಟಗಾರರ ವೇದಿಕೆಯು ಉಚಿತವಾಗಿ ಮೇಲ್ಮನವಿ ಮಾಡಿಸಿದೆ ಎಂದು ಹೋರಾಟದ ಪ್ರಮುಖ ಸಂಚಾಲಕರಾದ ರಾಮ ಮರಾಠಿ ಮತ್ತು ಮಹೇಶ ನಾಯ್ಕ ಕಾನಳ್ಳಿ ಈ ಸಂದರ್ಭದಲ್ಲಿ ಹೇಳಿದರು.


ಹೋರಾಟಗಾರರ ವೇದಿಕೆಯ ಸಂಚಾಲಕ ಮಹೇಶ ನಾಯ್ಕ ಕಾನಳ್ಳಿ, ರಾಮ ಮರಾಠಿ, ನಗರ ಸಮಿತಿ ಅಧ್ಯಕ್ಷ ಸುರೇಶ ಮೇಸ್ತಾ, ವಿನೋದ ನಾಯ್ಕ ಯಲ್ಕೋಟಗಿ, ಸುರೇಶ ನಾಯ್ಕ ನಗರಬಸ್ತಿಕೇರಿ, ಅನಿತಾ ಲೋಫೀಸ್, ಸಾಂತೋನ ಫರ್ನಾಂಡಿಸ್, ಲಂಬೋದರ ನಾಯ್ಕ, ಜನಾರ್ಧನ ನಾಯ್ಕ, ಶಾಂತಾ ಗಂಗಾ ಗೌಡ, ದಾವುದ್ ಖಾನ್, ಮಾದೇವ ನಾಯ್ಕ, ಚಂದ್ರಹಾಸ ನಾಯ್ಕ ಮಾವಳ್ಳಿ, ಗಣೇಶ ನಾಯ್ಕ, ಜಾನ್ ಓಡ್ತಾ ಮಾಗೋಡ ಮುಂತಾದವರು ನೇತೃತ್ವ ವಹಿಸಿದರು.

ಜಿಪಿಎಸ್ ಅಸಮರ್ಪಕ:

ಅರಣ್ಯ ಹಕ್ಕು ಕಾಯಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ, ಸುತ್ತೋಲೆ ಮತ್ತು ಕಾನೂನಿನ ಮಾನ ದಂಡದ ಹೊರತಾಗಿ ಜಿಪಿಎಸ್ ನಕಾಶೆ ತಯಾರಿಸಿ ಅರಣ್ಯವಾಸಿಯ ಪ್ರಕರಣದ ಕಡತದಲ್ಲಿ ಸೇರಿಸಲಾಗಿದೆ. ವಲಯ ಅರಣ್ಯ ಅಧಿಕಾರಿ, ಕಂದಾಯ ಅಧಿಕಾರಿ, ಅರಣ್ಯ ಹಕ್ಕು ಸಮಿತಿ ದೃಡೀಕರಣವಿಲ್ಲದ ಜಿಪಿಎಸ್ ನಕಾಶೆಯು ಅಸಮರ್ಪಕವಾಗಿದ್ದು, ಕಾನೂನಿನ ಮೌಲ್ಯತೆಯು ಇಂದು ಚರ್ಚೆಗೆ ಕಾರಣವಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.