Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-29

ಗೋಕರ್ಣದಲ್ಲಿ ಕೋಮಾರಪಂಥರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು

News Details

ಗೋಕರ್ಣ: ಕೋಮಾರಪಂಥ ಸಮಾಜದವರು ವಾರ್ಷಿಕವಾಗಿ ಮಹಾಬಲೇಶ್ವರ ಮಂದಿರದಲ್ಲಿ ನೆರವೇರಿಸುವ ರಥೋತ್ಸವ ಅಮಾವಾಸ್ಯೆ ದಿನವಾದ ರವಿವಾರ ರಾತ್ರಿ ವಿಜೃಂಭಣೆಯಿAದ ನಡೆಯಿತು.
ಮುಂಜಾನೆ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ನಂತರ ಸಂಜೆ ವೆಂಕಟ್ರಮಣ ಮಂದಿರದಿAದ ಈ ಸಮಾಜದವರಯ ಮೆರವಣಿಗೆ ನಡೆಸಿ ಮಹಾಬಲೇಶ್ವರ ಮಂದಿರಕ್ಕೆ ಆಗಮಿಸಿ ಪೂಜೆ ನೆರವೇರಿಸಿದ ಬಳಿಕ ರಾತ್ರಿ ಶ್ರೀದೇವರ ಉತ್ಸವ ರಥಬೀದಿಗೆ ಆಗಮಿಸಿ ಸಾರ್ವಭೌಮ ರಥಾರೋಢವಾದ ಬಳಿಕ ರಥವನ್ನ ವೆಂಕಟ್ರಮಣ ದೇವಾಲಯದವರೆಗೆ ತೆರಳಿ ಮರಳಿತು.
ಮಂದಿರದ ಅರ್ಚಕರಾದ ವೇ. ಅಮೃತೇಶ ಹಿರೇ ಪೂಜಾ ಕೈಂಕರ್ಯ ನೆರವೇರಿಸಿದರು.
ಈ ಸಮಾಜದವರು ಹಾಗೂ ಉಳಿದ ಭಕ್ತವೃಂದದವರು ಜಯಘೋಷದೊಂದಿಗೆ ರಥ ಎಳೆದು ಸಂಭ್ರಮಿಸಿ ಮಹಾದೇವನಿಗೆ ವಂದಿಸಿದರು.
ಶತಮಾನಗಳ ಹಿಂದೆ ಈ ಸಮಾಜದವರು ಮಹಾಬಲೇಶ್ವರ ಮಂದಿರಕ್ಕೆ ಬೆಳ್ಳಿ ಕಳಸ (ಕೊಡ) ವನ್ನ ನೀಡಿದ್ದರು. ವೈಶಾಖ ಅಮಾವಾಸ್ಯೆಯ ಈ ದಿನದಂದು ಪ್ರತಿ ವರ್ಷ ಆತ್ಮಲಿಂಕ್ಕೆ ಅಭಿಷೇಕ ಸಲ್ಲಿಸಿ ರಥೋತ್ಸವ ನಡೆಸುತ್ತಾ ಬಂದಿದ್ದು ಅದರಂತೆ ನಡೆಯಿತು.ಮಂದಿರದ ಮೇಲುಸ್ತುವಾರಿ ಸಮಿತಿ ಮಾರ್ಗದರ್ಶನದಲ್ಲಿ ನಡೆದ ರೂಢಿಗತ ರಥೋತ್ಸವದಲ್ಲಿ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರು, ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು , ಕೋಮಾರ ಪಂಥ ಸಮಾಜದ ಪ್ರಮುಖರು, ಜಿಲ್ಲೆಯ ವಿವಿದಡೆಯಲ್ಲಿರುವ ಹಾಗೂ ಗೋವಾ ಮತ್ತಿತರ ಕಡೆಯಿಂದ ಆಗಮಿಸಿದ ಕೋಮಾರಪಂಥ ಸಮಾಜದವರು ಪಾಲ್ಗೊಂಡಿದ್ದರು.