
ದಾನಕೊಪ್ಪ ಕಾಳಂಗಿ ಸಹಕಾರ ಸಂಘದಲ್ಲಿ ಭಿನ್ನಮತ: ಶಾಸಕ ಶಿವರಾಮ ಹೆಬ್ಬಾರ್ ವಿಶೇಷ ಸಭೆ
News Details
ಶಿರಸಿಯ ದಾನಕೊಪ್ಪದ ಕಾಳoಗಿ ಸೇವಾ ಸಹಕಾರಿ ಸಂಘದಲ್ಲಿ ಭಿನ್ನಮತ ಕಾಣಿಸಿಕೊಂಡ ಹಿನ್ನಲೆ ಕೆಡಿಸಿಸಿ ಅಧ್ಯಕ್ಷರೂ ಆಗಿರುವ ಶಿವರಾಮ ಹೆಬ್ಬಾರ್ ವಿಶೇಷ ಸಭೆ ನಡೆಸಿದ್ದಾರೆ.
ಬೆಳೆ ಸಾಲ ತುಂಬಲು ಏಪ್ರಿಲ್ 30 ಕೊನೆ ದಿನವಾಗಿದ್ದು, ಈ ಅವಧಿ ವಿಸ್ತರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಆದರೆ, ಆಡಳಿತ ಮಂಡಳಿ ಇದಕ್ಕೆ ಒಪ್ಪಲಿಲ್ಲ. ಸಂಘದ ಉಪಾಧ್ಯಕ್ಷರ ವಿರುದ್ಧವೂ ಸದಸ್ಯರು ಸಾಕಷ್ಟು ಆರೋಪ ಮಾಡಿದರು.
ಸೊಸೈಟಿ ಗೊಂದಲ ಬಗೆಹರಿಸುವಂತೆ ಆ ಭಾಗದವರು ಶಿವರಾಮ ಹೆಬ್ಬಾರ್ ಅವರನ್ನು ಕೇಳಿಕೊಂಡಿದ್ದು, ಶಿವರಾಮ ಹೆಬ್ಬಾರ್ ಜನರನ್ನು ಸಮಸ್ಯೆ ಆಲಿಸಿದರು. ಈ ವೇಳೆ ಸಹಕಾರಿ ಸಂಘ ಆಡಳಿತ ಮಂಡಳಿಯು ಬೆಳೆ ಸಾಲ ತುಂಬುವ ಆದೇಶಕ್ಕೆ ಸದಸ್ಯರು ಆಕ್ಷೇಪಿಸಿದರು.
ಆಗ 'ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷನಾಗಿ ನಾನು ಮೇ 2ನೇ ತಾರಿಕಿನವರೆಗೆ ಬೆಳೆ ಸಾಲ ಪಾವತಿಗೆ ಅವಧಿ ವಿಸ್ತರಿಸಲು ಸಾಧ್ಯ' ಎಂದು ಶಿವರಾಮ ಹೆಬ್ಬಾರ್ ಹೇಳಿದರು. 'ಅಷ್ಟರೊಳಗೆ ಸಾಲ ಮರುಪಾವತಿಸಿ' ಎಂದು ಸೂಚಿಸಿದರು. ಅದಾದ ನಂತರ ಮತ್ತೆ ಕೂಡಲೇ ಬೆಳೆ ಸಾಲ ಮಂಜೂರಿ ಮಾಡಿಸಿಕೊಡುವುದಾಗಿ ಘೋಷಿಸಿದರು. ಇದರಿಂದ ಸದಸ್ಯರು ಸಮಾಧಾನಗೊಂಡರು