
ಅಂಕೋಲಾದಲ್ಲಿ ಭಿನ್ನ ಜಾಗೃತಿ ಅಭಿಯಾನ
News Details
ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ದಾಳಿ ಖಂಡಿಸಿ ಅಂಕೋಲಾದಲ್ಲಿ ಕೆಲಸ ಮಾಡುವ ಸರ್ಕಾರಿ ಸಿಬ್ಬಂದಿಯೊಬ್ಬರು ವಿಭಿನ್ನವಾಗಿ ಜನ ಜಾಗೃತಿ ನಡೆಸುತ್ತಿದ್ದಾರೆ.
ಭೂ ಮಾಪನಾ ಇಲಾಖೆಯ ನೌಕರ ರಾಘವ ನಾಯಕ ಅವರು ಅಂಕೋಲಾದ ಹಲವು ಕಡೆ ಪಾಕಿಸ್ತಾನದ ವಿರುದ್ಧ ಚಿತ್ರ ಬಿಡಿಸಿದ್ದಾರೆ. ಪಾಕಿಸ್ತಾನದವರನ್ನು ಅಶ್ಲೀಲ ಶಬ್ದದಿಂದಲೂ ಅವರು ನಿಂದಿಸಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಅಲ್ಲೆಲ್ಲಿ ಅವರು ಬಿತ್ತಿಪತ್ರಗಳನ್ನು ಅಂಟಿಸಿದ್ದಾರೆ.
ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಅಂಕೋಲಾ ಪೊಲೀಸರು ರಾಘವ ಅವರನ್ನು ಠಾಣೆಗೆ ಕರೆಯಿಸಿದರು. 'ಚಿತ್ರ ಬಿಡಿಸಿದ್ದು ನಾನೇ. ಆದರೆ, ಇದರಿಂದ ಯಾವುದೇ ಅಪರಾಧ ನಡೆದಿಲ್ಲ' ಎಂದು ರಾಘವ ನಾಯಕ ಧೈರ್ಯವಾಗಿ ಸಮಜಾಯಿಶೀ ನೀಡಿದ್ದಾರೆ. 'ನಾನೊಬ್ಬ ಸರ್ಕಾರಿ ನೌಕರ. ಭಾರತ ದೇಶದ ಭಕ್ತ. ಪಾಕಿಸ್ತಾನದ ದಾಳಿ ಖಂಡಿಸಿ ಈ ಹೋರಾಟ ನಡೆಸಿದ್ದೇನೆ' ಎಂದು ರಾಘವ ನಾಯಕ ಹೇಳಿದ್ದಾರೆ.
'ದೇಶದ್ರೋಹಿ ಕೃತ್ಯ ನಡೆದಾಗ ನಾನು ಕಣ್ಣು ಮುಚ್ಚಿ ಕೂರುವುದಿಲ್ಲ. ಅದನ್ನು ಖಂಡಿಸುವುದು ನನ್ನ ಹಕ್ಕು' ಎಂದು ರಾಘವ ನಾಯಕ ಅವರು ಬರೆದುಕೊಟ್ಟಿದ್ದಾರೆ. ಅವರ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ.