
ಕಂಚಿ ಕಾಮಕೋಟಿ ಪೀಠಕ್ಕೆ ಸತ್ಯ ಚಂದ್ರಶೇಖರೇಂದ್ರ ಸರಸ್ವತಿ ಉತ್ತರಾಧಿಕಾರಿ
News Details
ಕಂಚಿ ಕಾಮಕೋಟಿ ಪೀಠದ ಶಂಕರ ವಿಜಯೇಂದ್ರ ಸರಸ್ವತಿಗಳು ಶಿಷ್ಯ ಸ್ವೀಕಾರ ಮಾಡಿದ್ದು, ತಮ್ಮ ಉತ್ತರಾಧಿಕಾರಿಗೆ ಸತ್ಯ ಚಂದ್ರಶೇಖರೇಂದ್ರ ಸರಸ್ವತಿ ಎಂಬ ಯೋಗ ಪಟ್ಟ ನೀಡಿದ್ದಾರೆ.
ಅಕ್ಷಯ ತೃತೀಯ ದಿನವಾದ ಇಂದು ಕಂಚಿ ಮಠದಲ್ಲಿ ಉತ್ತರಾಧಿಕಾರಿಯ ಸನ್ಯಾಸ ಸ್ವೀಕಾರ ಕಾರ್ಯಕ್ರಮ ನಡೆಯಿತು ಕಳೆದ 2-3 ದಿನಗಳಿಂದ ಮಠದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು.
ಆಂಧ್ರಪ್ರದೇಶದ ಅನ್ನಾವರಮ್ ಮೂಲದ ಸುಬ್ರಹ್ಮಣ್ಯ ಗಣೇಶ್ ಶರ್ಮಾ ದ್ರಾವಿಡ್ ಗೆ ಶಂಕರ ವಿಜಯೇಂದ್ರ ಸರಸ್ವತಿಗಳು ಸನ್ಯಾಸ ದೀಕ್ಷೆ ನೀಡಿದ್ದಾರೆ. ಸತ್ಯ ಚಂದ್ರಶೇಖರೇಂದ್ರ ಸರಸ್ವತಿ ಕಂಚಿ ಪೀಠಕ್ಕೆ 71 ನೇ ಪೀಠಾಧಿಪತಿಗಳಾಗಲಿದ್ದಾರೆ.
25 ವರ್ಷದ ಗಣೇಶ ಶರ್ಮಾ ದ್ರಾವಿಡ್ (ಸತ್ಯ ಚಂದ್ರಶೇಖರೇಂದ್ರ ಸರಸ್ವತಿ) ಅವರು 2006 ರಿಂದಲೂ ವೇದ ವಿದ್ಯೆಯ ಅಧ್ಯಯನದಲ್ಲಿ ತೊಡಗಿದ್ದು ಋಗ್ವೇದ, ಯಜುರ್ವೇದ, ಸಾಮವೇದ, ದಶೋಪನಿಷತ್ತು ಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ. ವಿದ್ವಾಂಸರಾದ ಅವರು ಅನ್ನಾವರಂ ದೇವಸ್ಥಾನದಲ್ಲಿ ಮತ್ತು ತೆಲಂಗಾಣದ ನಿಜಾಮಾಬಾದ್ (ನಿರ್ಮಲ್ ಜಿಲ್ಲೆ) ನಲ್ಲಿರುವ ಬಸರ ಶ್ರೀ ಜ್ಞಾನ ಸರಸ್ವತಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ್ದಾರೆ.
ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಾದ್ಯಂತದ ವಿವಿಧ ದೇವಾಲಯಗಳಿಂದ ದೇವಾಲಯದ ಪ್ರತಿನಿಧಿಗಳು ನೂತನ ಯತಿಗಳಿಗೆ ಪ್ರಸಾದಗಳನ್ನು ಅರ್ಪಿಸಿದರು.