
0:00:00
2025-05-01
ಶಿರಸಿ ಬಿಸಿಲಕೊಪ್ಪದಲ್ಲಿ ಮನೆ ಬೆಂಕಿಗೆ ಆಹುತಿ: ಗಿರಿಜಾ ನಾಯ್ಕ ಕುಟುಂಬಕ್ಕೆ ಸೂರಿಲ್ಲ
News Details
ಶಿರಸಿಯ ಬಿಸಿಲಕೊಪ್ಪದಲ್ಲಿ ಮನೆಯೊಂದು ಬೆಂಕಿಗೆ ಆಹುತಿಯಾಗಿದೆ. ಪರಿಣಾಮ ಮೂಡೆಬೈಲಿನ ಗಿರಿಜಾ ನಾಯ್ಕ ಅವರ ಕುಟುಂಬಕ್ಕೆ ಸೂರಿಲ್ಲವಾಗಿದೆ.
ಕಳೆದ ಮಳೆಗಾಲದ ವೇಳೆ ಗಿರಿಜಾ ನಾಯ್ಕ ಅವರ ಮನೆ ಮುರಿದು ಬಿದ್ದಿತ್ತು. ಸರ್ಕಾರದ ಸಹಾಯವೂ ಇಲ್ಲದೇ ಅವರು ಮನೆ ದುರಸ್ಥಿ ಮಾಡಿಕೊಂಡಿದ್ದರು. ಮಳೆ ಬಂದಾಗ ಸೋರುತ್ತಿದ್ದರೂ ಅನಿವಾರ್ಯವಾಗಿ ಅವರು ಅಲ್ಲಿಯೇ ವಾಸವಾಗಿದ್ದರು.
ಈ ನಡುವೆ ಬುಧವಾರ ಅವರು ಬಸವ ಜಯಂತಿ ಕಾರ್ಯಕ್ರಮಕ್ಕೆ ಹೋಗಿದ್ದರು. ಆಗ ಆ ಮನೆಗೆ ಬೆಂಕಿ ಬಿದ್ದಿದ್ದು, ಮನೆಯೊಳಗಿದ್ದ ಪಾತ್ರೆ-ಬಟ್ಟೆಗಳೆಲ್ಲವೂ ಸುಟ್ಟು ಕರಕಲಾದವು. ದಿನಸಿ ಸಾಮಗ್ರಿಗಳು ಹೊತ್ತಿ ಉರಿಯಿತು.