
ಜಿಎಸ್ಟಿ ಕಲೆಕ್ಷನ್ ಏಪ್ರಿಲ್ನಲ್ಲಿ 2.37 ಲಕ್ಷ ರೂ; ಹೊಸ ದಾಖಲೆ ಬರೆದ ತೆರಿಗೆ ಸಂಗ್ರಹ; ಕರ್ನಾಟಕ ಟಾಪ್-2
News Details
ಸರಕು ಮತ್ತು ಸೇವಾ ತೆರಿಗೆ ಸಂಗ್ರಹ (GST collections) 2025ರ ಏಪ್ರಿಲ್ ತಿಂಗಳಲ್ಲಿ 2.37 ಲಕ್ಷ ಕೋಟಿ ರೂನಷ್ಟಾಗಿರುವುದು ತಿಳಿದುಬಂದಿದೆ. ಇಲ್ಲಿಯವರೆಗೆ ಯಾವುದೇ ತಿಂಗಳಲ್ಲಿ ಕಂಡ ಅತಿಹೆಚ್ಚು ತೆರಿಗೆ ಸಂಗ್ರಹ ಇದಾಗಿದೆ. ಆ ಮಟ್ಟಿಗೆ ಇದು ಹೊಸ ದಾಖಲೆ. ಹಿಂದಿನ ತಿಂಗಳಲ್ಲಿ (2025ರ ಮಾರ್ಚ್) 1.96 ಲಕ್ಷ ರೂ ಜಿಎಸ್ಟಿ ಸಂಗ್ರಹವಾಗಿತ್ತು. ಹಿಂದಿನ ವರ್ಷದ ಏಪ್ರಿಲ್ನಲ್ಲಿ (2024ರದ್ದು) 2.10 ಲಕ್ಷ ರೂ ಜಿಎಸ್ಟಿ ಸಿಕ್ಕಿತ್ತು. ಈ ಬಾರಿ ಎಲ್ಲಾ ದಾಖಲೆ ಧೂಳೀಪಟವಾಗಿದೆ. ರೀಫಂಡ್ ಕಳೆದು 2.09 ಲಕ್ಷ ಕೋಟಿ ರೂ ನಿವ್ವಳ ಜಿಎಸ್ಟಿ ಹರಿದುಬಂದಿದೆ.
ಕಳೆದ ಆರೇಳು ತಿಂಗಳಿಂದ ಜಿಎಸ್ಟಿ ಸಂಗ್ರಹ ಗಣನೀಯವಾಗಿ ಏರಿಕೆ ಆಗುತ್ತಾ ಬಂದಿದೆ. ಅಕ್ಟೋಬರ್ನಿಂದ ಮಾರ್ಚ್ವರೆಗಿನ ಆರು ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಪ್ರತೀ ತಿಂಗಳೂ 1.73 ಲಕ್ಷ ಕೋಟಿ ರೂನಿಂದ 1.96 ಲಕ್ಷ ಕೋಟಿ ರೂವರೆಗೆ ಆಗಿರುವುದು ಅಂಕಿ ಅಂಶದಿಂದ ಗೊತ್ತಾಗುತ್ತದೆ. ಸಾಮಾನ್ಯವಾಗಿ ಹಣಕಾಸು ವರ್ಷದ ಕೊನೆಯ ತಿಂಗಳು ಹಾಗೂ ಆರಂಭಿಕ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಹೆಚ್ಚಿರುತ್ತದೆ.