
0:00:00
2025-05-02
ನಿರುದ್ಯೋಗದ ಬೇದನೆ: ಶಿರಸಿಯ ಸೆಂಟ್ರಿಂಗ್ ಕಾರ್ಮಿಕ ಮಹಾಬಲೇಶ್ವರ ಗೌಡ ಆತ್ಮಹತ್ಯೆಗೆ ಶರಣು
News Details
ಶಿರಸಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮಹಾಬಲೇಶ್ವರ ಗೌಡ ಅವರು ನಿರುದ್ಯೋಗದ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
28 ವರ್ಷದ ಮಹಾಬಲೇಶ್ವರ ಗೌಡ ಅವರು ಶಿವಳ್ಳಿ ಹೆಗಡೆಕಟ್ಟಾದ ಕಾಶಿಮನೆಯಲ್ಲಿ ವಾಸವಾಗಿದ್ದರು. ಕಟ್ಟಡ ನಿರ್ಮಾಣದ ವೇಳೆ ಅವರು ಸೆಂಟ್ರಿಂಗ್ ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದರು. ಆದರೆ, ಅವರಿಗೆ ಯಾರೂ ಕೆಲಸ ಕೊಡುತ್ತಿರಲಿಲ್ಲ. ಜೀವನ ನಿರ್ವಹಣೆಗಾಗಿ ಅವರು ಅಲ್ಲಲ್ಲಿ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಅವರಿಂದ ಸಾಧ್ಯವಾಗಿರಲಿಲ್ಲ. ಸಾಕಷ್ಟು ಹುಡುಕಾಟ ನಡೆಸಿದರೂ ಅವರಿಗೆ ಅಗತ್ಯವಿರುವ ಕೆಲಸ ಸಿಗದ ಕಾರಣ ಮಾನಸಿಕವಾಗಿ ಕುಗ್ಗಿದ್ದರು.
ಏಪ್ರಿಲ್ 30ರ ಬೆಳಗ್ಗೆ ಮನೆ ಮುಂದಿನ ಕಾಡಿಗೆ ಹೋದ ಅವರು ಮೇ 1ರಂದು ಶವವಾಗಿ ಕಾಣಿಸಿಕೊಂಡರು. ಪಿಳ್ಳೆ ಮರದ ಟೊಂಗೆಗೆ ನೇತಾಡುತ್ತಿದ್ದ ಶವ ನೋಡಿದ ನಾಗು ಗೌಡ ಅವರು ತಮ್ಮ ಮಗನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು