Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-03

ಗೋದಾಮಿನಿಂದ ಕಪ್ಪು ಚಿರತೆಯನ್ನು ಅರಣ್ಯ ಇಲಾಖೆ ಕಾಡಿಗೆ ಓಡಿಸಿತು.

News Details

ಕೃಷಿ‌ ಗೋದಾಮಿನಲ್ಲಿ ಅಡಗಿ ಕುಳಿತಿದ್ದ ಕಪ್ಪು ಚಿರತೆಯನ್ನು ಶಿರಸಿ ಅರಣ್ಯ ಸಿಬ್ಬಂದಿ ಕಾಡಿಗೆ ಓಡಿಸಿದ್ದಾರೆ.

ಶಿರಸಿ ತಾಲೂಕಿನ ಮೂಲೆಮನೆ ಮಹಾಬಲೇಶ್ವರ ಹೆಗಡೆ ಅವರ ಮನೆಯ ಸ್ನಾನದ ಗೃಹದ ಪಕ್ಕದಲ್ಲಿ ಶುಕ್ರವಾರ ಚಿರತೆ ಕಾಣಿಸಿತು. ಕೃಷಿ ಉಪಕರಣಗಳನ್ನು ಇಡುವ ಈ ಪ್ರದೇಶದ ಮೂಲೆಯಲ್ಲಿ ಚಿರತೆ ಅಡಗಿ ಕುಳಿತಿತ್ತು. ಒಲೆಗೆ ಬೆಂಕಿ ಹಾಕುವುದಕ್ಕಾಗಿ ಮಹಾಬಲೇಶ್ವರ ಹೆಗಡೆ ಅವರಿಗೆ ಹೊಳೆಯುವ ಕಣ್ಣು ಕಾಣಿಸಿತು. ಹತ್ತಿರ ಹೋದಾಗ ಚಿರತೆಯ ಘರ್ಜನೆ ಕೇಳಿಸಿತು.

ಇದರಿಂದ ಮನೆಯೊಳಗಿದ್ದವರು ಆತಂಕಕ್ಕೆ ಒಳಗಾದರು. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಓಡಿಸಲು ಸಾಕಷ್ಟು ಪ್ರಯತ್ನ ನಡೆಸಿದರು.‌ ಮಾನವನ ಮಾತಿನ ಸದ್ದಿಗೆ ಬೆದರಿದ ಚಿರತೆ ಕಟ್ಟಿಗೆಯಿಡುವ ಮನೆ ಕಡೆ ಸಂಚರಿಸಿತು. ಆದರೆ, ವಸತಿ ಪ್ರದೇಶ ಬಿಟ್ಟು ಕಾಡಿಗೆ ತೆರಳಲು ಸಾಕಷ್ಟು ಚಡಪಡಟಿಕೆ ಅನುಭವಿಸಿತು.

ಚಿರತೆ ಅವಿತ ಕೋಣೆ ಕತ್ತಲೆಯಿಂದ ಕೂಡಿರುವುದು ಕಾರ್ಯಾಚರಣೆಗೆ ತೊಡಕಾಯಿತು. ಪಟಾಕಿ ಹೊಡೆದು ಚಿರತೆಯನ್ನು ಕೊಣೆಯಿಂದ ಹೊರಗೆ ತಂದು ಬಲೆಯಲ್ಲಿ ಬಂಧಿಸುವ ಪ್ರಯತ್ನ ನಡೆಯಿತು. ಆದರೆ, ಅದು ಫಲ ಕೊಡಲಿಲ್ಲ.

ಸತತ ಮೂರು ಗಂಟೆ ಪ್ರಯತ್ನದ ನಂತರ‌ ಅರಣ್ಯ ಸಿಬ್ಬಂದಿ ಚಿರತೆಯನ್ನು ಕೋಣೆಯಿಂದ ಹೊರ ಹಾಕಿದರು. ಕೊನೆಗೆ ಚಿರತೆ ಕಾಡಿನ ಕಡೆ ಓಡಿತು.