Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-03

ಕಾಶ್ಮೀರದಲ್ಲಿ ಕನ್ನಡಿಗರಿಂದ ಶಂಕರಾಚಾರ್ಯ ಜಯಂತಿ ಆಚರಣೆ: ಯೋಧರಿಗೆ ಶಕ್ತಿ ತುಂಬಲು, ಶಾಂತಿಗಾಗಿ ವಿಶೇಷ ಪೂಜೆ

News Details

ಉಗ್ರರ ದಾಳಿಯ ಭೀತಿಯ ನಡುವೆಯೂ ಶ್ರೀನಗರದ ಆದಿ ಶಂಕರಾಚಾರ್ಯ ಮಠದಲ್ಲಿ ವಿಶೇಷ ಶಂಕರಾಚಾರ್ಯ ಜಯಂತಿ ಆಚರಿಸಲಾಗಿದೆ. ಮೈಸೂರು ಮತ್ತು ಬೆಂಗಳೂರಿನಿಂದ 13 ಜನರ ತಂಡ ವಿಶೇಷ ಪೂಜೆ ನೆರವೇರಿಸಿದೆ. ಜಮ್ಮು ಮತ್ತು ಕಾಶ್ಮೀರಿನ ಶಾಂತಿ ಮತ್ತು ಯೋಧರ ಕ್ಷೇಮಕ್ಕಾಗಿ ಪ್ರಾರ್ಥಿಸಲಾಗಿದೆ. ರುದ್ರಾಭಿಷೇಕ, ಮೃತ್ಯುಂಜಯ ಜಪ, ಹೋಮ ಮಾಡಲಾಗಿದೆ.

ಪಹಲ್ಗಾಮ್ (Pahalgam) ಉಗ್ರ ದಾಳಿಯ ಪ್ರಕರಣದ ತನಿಖೆ ಚುರುಕುಗೊಂಡಿದೆ. ಉಗ್ರರ ರಣಬೇಟೆಗೆ ಇಳಿದಿರುವ ಎನ್​ಐಎ ಪ್ರಕರಣದ ಒಂದೊಂದೇ ಮಾಹಿತಿ ಬಯಲಿಗೇಳೆಯುತ್ತಿದೆ. ಭಾರತ ವಾಯುಸೇನೆ, ಗಡಿಯಲ್ಲಿ ಪಾಕ್​ಗೆ ಖಡಕ್ ಎಚ್ಚರಿಕೆ ರವಾನಿಸಲಾಗಿದೆ. ಈ ಮಧ್ಯೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಶ್ರೀ ಆದಿ ಶಂಕರಾಚಾರ್ಯ ಮಠದಲ್ಲಿ ಇಂದು ಕನ್ನಡಿಗರಿಂದ (Kannadigaru) ವಿಶೇಷ ಪೂಜೆ ಮಾಡಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಪ್ರಾರ್ಥಿಸಲಾಗಿದೆ.

ಮೈಸೂರು ಮತ್ತು ಬೆಂಗಳೂರಿನಿಂದ ತೆರಳಿದ್ದ 13 ಜನರ ತಂಡ ಶ್ರೀ ಆದಿ ಶಂಕರಾಚಾರ್ಯ ಮಠದಲ್ಲಿ ಶಂಕರಾಚಾರ್ಯ ಜಯಂತಿ ಆಚರಣೆ ಮಾಡಲಾಗಿದೆ. ದೇಶ ರಕ್ಷಣೆಗಾಗಿ, ಯೋಧರ ಆರೋಗ್ಯ ಶಕ್ತಿ ವೃದ್ಧಿ ಮತ್ತು ಜಮ್ಮು ಕಾಶ್ಮೀರಿನ ಸುರಕ್ಷತೆಗಾಗಿ ಸಿಆರ್​​ಪಿಎಫ್​ ಮತ್ತು ಆರ್ಮಿ ತಂಡದ ಸಹಾಯದಿಂದ ವಿಶೇಷ ರುದ್ರಾಭಿಷೇಕ, ಮೃತ್ಯುಂಜಯ ಜಪ, ಹೋಮ-ಹವನ ಮಾಡಲಾಗಿದೆ.

ಡಾ. ನಾಗಲಕ್ಷ್ಮಿ ನಾಗಾರ್ಜುನ್ ಮೈಸೂರು ತಂಡದಿಂದ ಆದಿ ಶಂಕರಾಚಾರ್ಯ ಜೀವನವನ್ನು ಭರತನಾಟ್ಯ ಮೂಲಕ ಪ್ರಸ್ತುತ ಪಡಿಸಿದ್ದಾರೆ. ಕಳೆದ 13 ವರ್ಷಗಳಿಂದ ಬೆಂಗಳೂರು ಮತ್ತು ಮೈಸೂರು ತಂಡಗಳಿಂದ ಜಮ್ಮು ಕಾಶ್ಮೀರನ ಶ್ರೀನಗರದ ಆದಿ ಶಂಕರಾಚಾರ್ಯ ಮಠದಲ್ಲಿ ಶ್ರೀ ಆದಿಶಂಕರ ಜಯಂತಿಯನ್ನು ನಡೆಸುತ್ತಾ ಬಂದಿವೆ.

ಇದೇ ವೇಳೆ ಪಾಕ್ ಆಕ್ರಮಿತಿ ಕಾಶ್ಮೀರ್ ಹಾಗೂ ಶಾರದಾ ಪೀಠ ವಾಪಸ್ ಭಾರತಕ್ಕೆ ಬರುವ ಹಾಗೆ ಎಲ್ಲಾ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಲಾಗಿದೆ. ಈ ವೇಳೆ ಸಾಧು ಸಂತರಾದ ಸುಬೇಂದ್ರ ಬಾನಿ, ಸ್ವಾಮಿ ವಿಶ್ವನಾಥನಂದ ಸರಸ್ವತಿ ಸುಬೇಂದ್ರ ಬಾನಿ, ಮಹಾ ಮಂಡಲೇಶ್ವರ ಶ್ರೀ ಅಕ್ಷಗಾನನಂದ ಜಿ ಉಪಸ್ಥಿತರಿದ್ದರು.

ಜಮ್ಮು-ಕಾಶ್ಮೀರದ ಪಹಲ್ಗಾಮ್​​ ಉಗ್ರರ ದಾಳಿಯಲ್ಲಿ ಈಗಾಗಲೇ ಕರ್ನಾಟಕದ ಇಬ್ಬರು ಸೇರಿದಂತೆ 26 ಪ್ರವಾಸಿಗರು ಸಾವಪ್ಪಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕದ ಸಾಕಷ್ಟು ಕುಟುಂಬಗಳು ಉಗ್ರರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಬಚಾವ್​ ಆಗಿ ಬಂದಿದ್ದಾರೆ. ಪಹಲ್ಗಾಮ್‌ನ ದಾಳಿ ಕಣ್ಣಾರೆ ಕಂಡು ಬೆಚ್ಚಿಬಿದ್ದಿದ್ದರು. ಹಾಗಾಗಿ 26 ಪ್ರವಾಸಿಗರ ರಕ್ತದೋಕುಳಿ ಹರಿಸಿದ್ದ ಉಗ್ರರಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಭಾರತ ಸರ್ವಸನ್ನದ್ಧವಾಗಿದೆ. ಪಾಕಿಸ್ತಾನಕ್ಕೆ ಮುಟ್ಟಿಕೊಳ್ಳುವ ರೀತಿ ಭಾರತ ಪ್ರತೀಕಾರ ಕೊಡುವುದಕ್ಕೆ ಮುಂದಾಗಿದೆ.