
ಭಟ್ಕಳ ಕುಟುಂಬ ಹತ್ಯೆ: ಶ್ರೀಧರ ಮತ್ತು ವಿನಯ ಭಟ್ಟ ದೋಷಿ ಘೋಷಣೆ; ಮೇ 6ರಂದು ಶಿಕ್ಷೆ ಘೋಷಣೆ
News Details
ಭಟ್ಕಳದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಂದ ಶ್ರೀಧರ ಭಟ್ಟ ಹಾಗೂ ವಿನಯ ಭಟ್ಟ ಎಂಬಾತರನ್ನು ನ್ಯಾಯಾಲಯ ದೋಷಿ ಎಂದು ಘೋಷಿಸಿದೆ. ಮೇ 6ರಂದು ಅವರಿಬ್ಬರಿಗೂ ಶಿಕ್ಷೆಯ ಪ್ರಮಾಣ ಘೋಷಣೆಯಾಗಲಿದೆ.
ಭಟ್ಕಳದ ಹಾಡುವಳ್ಳಿಯಲ್ಲಿ 2023 ರ ಫೆ 23ರಂದು ನಾಲ್ವರ ಕೊಲೆ ನಡೆದಿತ್ತು. ಶಂಭು ಭಟ್(65) ಅವರ ಪತ್ನಿ ಮಾದೇವಿ ಭಟ್ (40) ಮಗ ರಾಘವೇಂದ್ರ ಭಟ್ (34) ಹಾಗೂ ಸೊಸೆ ಕುಸುಮಾ ಭಟ್ (30) ಅವರನ್ನು ಶ್ರೀಧರ ಭಟ್ಟ ಹಾಗೂ ವಿನಯ ಭಟ್ಟ ಎಂಬಾತರು ಸೇರಿ ಕೊಚ್ಚಿ ಕೊಲೆ ಮಾಡಿದ್ದರು. ರಾಘವೇಂದ್ರ ಭಟ್ ಹಾಗೂ ಕುಸುಮಾ ದಂಪತಿಯ ಇಬ್ಬರು ಮಕ್ಕಳು ಸಾವಿನ ದವಡೆಯಿಂದ ತಪ್ಪಿಸಿಕೊಂಡಿದ್ದರು.
ಈ ಪ್ರಕರಣದ ಬಗ್ಗೆ ಶಂಭು ಭಟ್ ಅವರ ಪುತ್ರಿ ಜಯಾ ಅಡಿಗ ಪೊಲೀಸ್ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೋಲೀಸರು ಮೂವರನ್ನು ಬಂಧಿಸಿ ಇಬ್ಬರನ್ನು ತನಿಖೆಗೆ ಒಳಪಡಿಸಿದರು. ಪ್ರಕರಣ ದಾಖಲಿಸಿಕೊಂಡ ಆಗಿನ ಭಟ್ಕಳ ಗ್ರಾಮೀಣ ಠಾಣೆ ಸಿಪಿಐ ಚಂದನ ಗೋಪಾಲ ಅವರು ತನಿಖಾಧಿಕಾರಿಯಾಗಿ ಸಾಕ್ಷಿಗಳನ್ನು ಸಂಗ್ರಹಿಸಿದ್ದರು. ಜೊತೆಗೆ ಇಬ್ಬರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು.
71 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಬಳಿಕ ಶ್ರೀಧರ ಭಟ್ ಹಾಗೂ ಅವರ ಮಗ ವಿನಯ ಭಟ್ ದೋಷಿ ಎಂದು ನ್ಯಾಯಾಲಯ ಪರಿಗಣಿಸಲಾಗಿದೆ. ಈ ಪ್ರಕರಣದಲ್ಲಿನ ಇಬ್ಬರಯ ಕೊಲೆ ಮಾಡಿ ಸಾಕ್ಷ ನಾಶ ಮಾಡಿರುವುದು ಸಾಬೀತಾಗಿದೆ.
ಈ ಪ್ರಕರಣದ ಸರಕಾರಿ ಅಭಿಯೋಜಕರಾಗಿ ತನುಜಾ ಹೊಸಪಟ್ಟಣ ಇವರ ಕಾರ್ಯನಿರ್ವಹಿಸಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರದ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ ಅವರು ತಮ್ಮ ತೀರ್ಪು ನೀಡಿದ್ದಾರೆ.