
ಭಾರತ-ಪಾಕ್ ಉದ್ವಿಗ್ನತೆ ನಡುವೆ ಮತ್ತೊಂದು ದೇಶ ಆ್ಯಕ್ಟಿವ್! ವಿದೇಶಾಂಗ ಸಚಿವರು ಮಾಡ್ತಿರೋದೇನು?
News Details
ಪಹಲ್ಗಾಮ್ ದಾಳಿ (Pahalgam Attack) ಬಳಿಕ ಭಾರತ- ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಭಾರತ ಪಾಕಿಸ್ತಾನ ಮಧ್ಯೆ ಯುದ್ಧ ಸಂಭವಿಸುವ ಲಕ್ಷಣಗಳು (War Like Situation) ಗೋಚರಿಸುತ್ತಿವೆ. ಇದರ ಮಧ್ಯೆ ಮತ್ತೊಂದು ದೇಶ ಇರಾನ್ ಆ್ಯಕ್ಟಿವ್ (Iran Active) ಆಗಿದೆ. ಇರಾನ್ ರಾಜತಾಂತ್ರಿಕ ಚಟುವಟಿಕೆಯನ್ನು ಹೆಚ್ಚಿಸಿದ್ದು, ವಿದೇಶಾಂಗ ಸಚಿವರು ಮಧ್ಯಸ್ಥಿಕೆ (Mediation) ವಹಿಸಲು ಮುಂದಾಗಿದ್ದಾರೆ. ಇರಾನ್ ವಿದೇಶಾಂಗ ಸಚಿವರು ಮೊದಲು ಪಾಕಿಸ್ತಾನಕ್ಕೆ ಹೋಗಿ ನಂತರ ಭಾರತಕ್ಕೆ ಬರಲಿದ್ದಾರೆ. ಇದಕ್ಕೂ ಮೊದಲು ಕೂಡ ಇರಾನ್ ಮಧ್ಯಸ್ಥಿಕೆ ವಹಿಸಲು ಮುಂದಾಗಿತ್ತು, ಆದರೆ ಭಾರತ ಅದನ್ನು ಸ್ಪಷ್ಟವಾಗಿ ತಿರಸ್ಕರಿಸಿತ್ತು.
ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಮಧ್ಯೆ ಇರಾನ್ ಮತ್ತೊಮ್ಮೆ ಸಕ್ರಿಯವಾಗಿದೆ. ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಗ್ಚಿ ಮೇ.5 ರಂದು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇದಾದ ನಂತರ ಅವರು ಟೆಹ್ರಾನ್‌ಗೆ ಹಿಂತಿರುಗಲಿದ್ದಾರೆ. ಮತ್ತೆ ಕೆಲವು ದಿನಗಳ ನಂತರ ಅವರು ಭಾರತಕ್ಕೆ ಬರಲಿದ್ದಾರೆ. ಇರಾನ್ ಈಗಾಗಲೇ ಎರಡೂ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಲು ಮುಂದಾಗಿತ್ತು. ಇದಕ್ಕೆ ಭಾರತ ಸ್ಪಷ್ಟವಾಗಿ ನಿರಾಕರಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ, ಸೈಯದ್ ಅಬ್ಬಾಸ್ ಅರಗ್ಚಿಯವರ ಪಾಕಿಸ್ತಾನ ಭೇಟಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.