
0:00:00
2025-05-06
ಪ್ರಾಣಾಪಾಯದಿಂದ ಪಾರಾದ ಜೀವ: ವಿಭೂತಿ ಜಲಪಾತದಲ್ಲಿ ಇಬ್ಬರ ರಕ್ಷಣೆ
News Details
ಯಾಣ ಬಳಿಯ ವಿಭೂತಿ ಜಲಪಾತದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ,.
ಬೆಂಗಳೂರಿನಿAದ ಒಟ್ಟು ಆರು ಜನರು ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದರು. ನೀರಿಗಿಳಿದ ಸಂದರ್ಭದಲ್ಲಿ ಇಬ್ಬರು ಸೆಳೆತಕ್ಕೆ ಸಿಲುಕಿ ಅಪಾಯದಲ್ಲಿದ್ದರು, ಇದನ್ನ ಗಮನಿಸಿದ ಕರ್ತವ್ಯದಲ್ಲಿದ್ದ ಜೀವರಕ್ಷಕ ಸಿಬ್ಬಂದಿ ವಿಜಯ ನಾಯಕ ತಕ್ಷಣ ಧಾವಿಸಿ ಇಬ್ಬರ ಜೀವ ಉಳಿಸಿದ್ದಾರೆ. ಬೆಂಗಳೂರಿನ ಪ್ರಿಯೇಶ (೩೦). ಸುಪ್ರೀತ್(೩೨) ಜೀವಾಪಾಯದಿಂದ ಪಾರಾಗಿ ಬಂದವರಾಗಿದ್ದಾರೆ. ತನ್ನ ಜೀವದ ಹಂಗು ತೊರೆದು ಪ್ರವಾಸಿಗರ ಜೀವ ಉಳಿಸಿದ ಲೈಫ್ ಗಾರ್ಡ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಅಭಿನಂದಿಸಿ ಪ್ರಶಂಸಿಸಿದ್ದಾರೆ.